ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನೇಮಕಾತಿ 2023:Co-operative Bank Recruitment 2023 Bangalore

Co-operative Bank Recruitment 2023 Bangalore Details in Kannada:

Co-operative Bank Recruitment 2023 Bangalore: ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವಂತಹ ಹಲವು ಹುದ್ದೆಗಳ ನೇಮಕಾತಿಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಅಧಿನಿಯಮ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತದ ಉಪ ನಿಧಿ ಹಾಗೂ ಸಿಬ್ಬಂದಿ ನೇಮಕಾತಿ ಮತ್ತು ಸೇವಾ ನಿಯಮ ಹಾಗೂ ಆಡಳಿತ ಮಂಡಳಿ ಸಭೆಯ ನಿರ್ಣಯದಂತೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಕರೆಯಲಾಗಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನೇಮಕಾತಿ 2023:Co-operative Bank Recruitment 2023 Bangalore

ಈ ಸಹಕಾರಿ ಬ್ಯಾಂಕ್ ನೇಮಕಾತಿಯಲ್ಲಿ ಸೇವಕರು, ಜವಾನರು, ಡ್ರೈವರ್, ರಕ್ಷಕರು, ಕಿರಿಯ ಸಹಾಯಕರು, ಗುಮಾಸ್ತ, ಬೆರಳಚ್ಚುಗಾರ, ವ್ಯವಸ್ಥಾಪಕರು, ಆಯೋಜಕರು, ಲೆಕ್ಕಾಧಿಕಾರಿ, ಸೇರಿದಂತೆ ಇನ್ನೂ ಹಲವು ಹುದ್ದೆಗಳ ಪಟ್ಟಿಯನ್ನು ಕೆಳಗಡೆ ನೀಡಲಾಗಿದೆ. ಎಲ್ಲಾ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗೆ ಎಲ್ಲಾ ಅರ್ಹ ಅಭ್ಯರ್ಥಿಗಳು ಲಿಂಕ್ ಮುಖಾಂತರ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿಯ ವಿವರಗಳು: Co-operative Bank Recruitment 2023 Bangalore

ನೇಮಕಾತಿ ಇಲಾಖೆ ಹೆಸರುಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ
ಒಟ್ಟು ಹುದ್ದೆಗಳು18
ಉದ್ಯೋಗ ಸ್ಥಳಬೆಂಗಳೂರು

ಹುದ್ದೆಯ ವಿವರ :

 • ಸೇವಕರು/ ಜವಾನರು/ ಭದ್ರತಾ ರಕ್ಷಕರು/ ವಾಹನ ಚಾಲಕರು – 1 ಹುದ್ದೆ
 • ಕಿರಿಯ ಸಹಾಯಕರು/ ಗುಮಾಸ್ತ/ ಬೆರಳಚ್ಚುಗಾರ/ ದತ್ತಾಂಶ ನಮೂದು ಆಯೋಜಕರು – 06 ಹುದ್ದೆಗಳು
 • ಶಾಖಾ ವ್ಯವಸ್ಥಾಪಕರು/ಉಪ ವ್ಯವಸ್ಥಾಪಕರು/ ಲೆಕ್ಕಾಧಿಕಾರಿ – 03 ಹುದ್ದೆಗಳು
 • ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಡಿ.ಬಿ.ಎ – 01 ಹುದ್ದೆ
 • ಸಹಾಯಕ ವ್ಯವಸ್ಥಾಪಕರು/ ಸಹಾಯಕ ಲೆಕ್ಕಾಧಿಕಾರಿಗಳು/ ಕ್ಷೇತ್ರ ಅಧಿಕಾರಿಗಳು/ ವಸೂಲಾಧಿಕಾರಿಗಳು/ ಸಹಾಯಕ ಡಿ.ಬಿ.ಎ – 05 ಹುದ್ದೆಗಳು
 • ಹಿರಿಯ ಸಹಾಯಕರು/ ಹಿರಿಯ ದತ್ತಾಂಶ ನಮೂದು ಆಯೋಜಕರು – 02 ಹುದ್ದೆಗಳು
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ಹುದ್ದೆಗಳ ವೇತನದ ವಿವರ:

 • ಸೇವಕರು/ ಜವಾನರು/ ಭದ್ರತಾ ರಕ್ಷಕರು/ ವಾಹನ ಚಾಲಕರು – ವೇತನ ರೂ. 21,400 – 42,000/- ನೀಡಲಾಗುವುದು.
 • ಕಿರಿಯ ಸಹಾಯಕರು/ ಗುಮಾಸ್ತ/ ಬೆರಳಚ್ಚುಗಾರ/ ದತ್ತಾಂಶ ನಮೂದು ಆಯೋಜಕರು – ರೂ. 30,350 58,250/- ನೀಡಲಾಗುವುದು.
 • ಶಾಖಾ ವ್ಯವಸ್ಥಾಪಕರು/ಉಪ ವ್ಯವಸ್ಥಾಪಕರು/ ಲೆಕ್ಕಾಧಿಕಾರಿ – ರೂ. 43,000 – 83,900/- ನೀಡಲಾಗುವುದು.
 • ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಡಿ.ಬಿ.ಎ – ರೂ. 43,000 – 83,900/- ನೀಡಲಾಗುವುದು.
 • ಸಹಾಯಕ ವ್ಯವಸ್ಥಾಪಕರು/ ಸಹಾಯಕ ಲೆಕ್ಕಾಧಿಕಾರಿಗಳು/ ಕ್ಷೇತ್ರ ಅಧಿಕಾರಿಗಳು/ ವಸೂಲಾಧಿಕಾರಿಗಳು/ ಸಹಾಯಕ ಡಿ.ಬಿ.ಎ – ರೂ. 37,900 – 70,850/- ನೀಡಲಾಗುವುದು.
 • ಹಿರಿಯ ಸಹಾಯಕರು/ ಹಿರಿಯ ದತ್ತಾಂಶ ನಮೂದು ಆಯೋಜಕರು – ರೂ. 33,450 – 62,600/- ನೀಡಲಾಗುವುದು.

ವಯೋಮಿತಿ ವಿವರ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾದ 17/07/2023ರಂದು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ಶೈಕ್ಷಣಿಕ ವಿವರ: (Co-operative Bank Recruitment 2023 Bangalore):

 • ಶಾಖಾ ವ್ಯವಸ್ಥಾಪಕರು/ಉಪ ವ್ಯವಸ್ಥಾಪಕರು/ ಲೆಕ್ಕಾಧಿಕಾರಿ – ಅಭ್ಯರ್ಥಿಗಳಿಗೆ / ಅಕೌಂಟೆನ್ಸಿ/ ಎಕನಾಮಿಕ್ಸ್/ ಗಣಿತ/ ಸ್ಟ್ಯಾಟಿಸ್ಟಿಕ್ಸ್/ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಇವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪ್ರಥಮ ದರ್ಜೆ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. (ಕನಿಷ್ಠ 03 ವರ್ಷ ಬ್ಯಾಂಕಿನ ಅಧಿಕಾರಿ ಹುದ್ದೆಯಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು)
 • ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಡಿ.ಬಿ.ಎ – ಬಿಸಿಎ ಅಥವಾ ಬಿ. ಟೆಕ್ (ಕಂಪ್ಯೂಟರ್ಸ್) ವಿಷಯಗಳಲ್ಲಿ ಪ್ರಥಮ ದರ್ಜೆಯ ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. (ಕನಿಷ್ಠ 03 ವರ್ಷ ಬ್ಯಾಂಕಿನ ಅಧಿಕಾರಿ ಹುದ್ದೆಯಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು).
 • ಸಹಾಯಕ ವ್ಯವಸ್ಥಾಪಕರು/ ಸಹಾಯಕ ಲೆಕ್ಕಾಧಿಕಾರಿಗಳು/ ಕ್ಷೇತ್ರ ಅಧಿಕಾರಿಗಳು/ ವಸೂಲಾಧಿಕಾರಿಗಳು/ ಸಹಾಯಕ ಡಿ.ಬಿ.ಎ – ಈ ಹುದ್ದೆಗಳಿಗೆ ಅಕೌಂಟೆನ್ಸಿ/ ಎಕನಾಮಿಕ್ಸ್/ ಗಣಿತ/ ಸ್ಟ್ಯಾಟಿಸ್ಟಿಕ್ಸ್/ ಬಿಸಿನೆಸ್ ಅಡ್ಮಿನಿಸ್ಟ್ರೇಷನ್/ ಬಿಸಿಎ ಅಥವಾ ಬಿ. ಟೆಕ್ (ಕಂಪ್ಯೂಟರ್ಸ್) ವಿಷಯಗಳಲ್ಲಿ ಪ್ರಥಮ ದರ್ಜೆಯ ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. (ಕನಿಷ್ಠ 03 ವರ್ಷ ಬ್ಯಾಂಕಿನ ಅಧಿಕಾರಿ ಹುದ್ದೆಯಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು).
 • ಹಿರಿಯ ಸಹಾಯಕರು/ ಹಿರಿಯ ದತ್ತಾಂಶ ನಮೂದು ಆಯೋಜಕರು – ಅಕೌಂಟೆನ್ಸಿ/ ಎಕನಾಮಿಕ್ಸ್/ ಗಣಿತ/ ಸ್ಟ್ಯಾಟಿಸ್ಟಿಕ್ಸ್/ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಇವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪ್ರಥಮ ದರ್ಜೆ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
 • ಕಿರಿಯ ಸಹಾಯಕರು/ ಗುಮಾಸ್ತ/ ಬೆರಳಚ್ಚುಗಾರ/ ದತ್ತಾಂಶ ನಮೂದು ಆಯೋಜಕರು – ಅಭ್ಯರ್ಥಿಯೂ ಯಾವುದಾದರೂ ಒಂದು ವಿಷಯದಲ್ಲಿ ಪ್ರಥಮ ದರ್ಜೆ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
 • ಸೇವಕರು/ ಜವಾನರು/ ಭದ್ರತಾ ರಕ್ಷಕರು/ ವಾಹನ ಚಾಲಕರು – ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ(10th) ಅಥವಾ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು ಹಾಗೂ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಚಾಲನ ಪರಾವಣಿಗೆ (DL) ಅನುಭವವನ್ನು ಹೊಂದಿರಬೇಕು.

ಆಯ್ಕೆ ವಿಧಾನ:

 • ಈ ಹುದ್ದೆಗಳ ಆಯ್ಕೆ ವಿಧಾನವು ಬ್ಯಾಂಕಿನ ಸಿಬ್ಬಂದಿ ನೇಮಕಾತಿ ಮತ್ತು ಸೇವಾ ನಿಯಮಾವಳಿಯಂತೆ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುವುದು.
 • ಮೊದಲು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ, ಆ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಹುದ್ದೆಗಳಿಗನುಸಾರವಾಗಿ 1:5ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
 • ಲಿಖಿತ ಪರೀಕ್ಷೆಯ ಪಠ್ಯಕ್ರಮದ ವಿವರಗಳು ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ ಓದಿರಿ. ಲಿಂಕ್ ಕೊನೆಯಲ್ಲಿ ನೀಡಲಾಗಿದೆ.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ : Co-operative Bank Recruitment 2023 Bangalore

 • ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಸೂಚನೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
 • ನಂತರ, ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಇಲಾಖೆಯ ವೆಬ್ಸೈಟ್ ನಿಂದ ಅಥವಾ ಕೆಳಗೆ ನೀಡಲಾಗಿರುವ ಡೈರೆಕ್ಟ್ ಲಿಂಕ್ ಮುಖಾಂತರ ಕ್ಲಿಕ್ ಮಾಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಲ್ಲಿರಿ.
 • ಆ ನಿಗದಿತ ಅರ್ಜಿಯಲ್ಲಿ ಎಲ್ಲಾ ಮಾಹಿತಿಗಳನ್ನು ತುಂಬಿದ ಬಳಿಕ & ಅರ್ಜಿ ಶುಲ್ಕ ಪಾವತಿಸಿದ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಲಗತ್ತಿಸಿ “ವ್ಯವಸ್ಥಾಪಕ ನಿರ್ದೇಶಕರು, ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ, ಆಡಳಿತ ಕಛೇರಿ, ನಂ.113, ಆರ್.ವಿ.ರಸ್ತೆ, ವಿ.ವಿ.ಪುರಂ, ಬೆಂಗಳೂರು -560004” ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಭೇಟಿ ನೀಡಿ ಕೂಡ ಕಳುಹಿಸಬಹುದು.
 • ಮುಖ್ಯವಾಗಿ ಸಲ್ಲಿಸಿದ ಅರ್ಜಿ ಫಾರಂ & ಇತರ ದಾಖಲೆಗಳನ್ನು ಒಳಗೊಂಡಿರುವ ಸೀಲ್ ಮಾಡಿದ ಆ ಲಕೋಟೆಯ ಮೇಲೆ “ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ 2023 ಎಂದು ನಮೂದಿಸಬೇಕು.”
 • ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ ವಿವರಗಳು:

 • ಸೇವಕರು/ ಜವಾನರು/ ಭದ್ರತಾ ರಕ್ಷಕರು/ ವಾಹನ ಚಾಲಕರು ಹುದ್ದೆಗಳಿಗೆ – ರೂ. 177/- ಅನ್ನು ಪಾವತಿಸಬೇಕು.
 • ಉಳಿದ ಎಲ್ಲಾ ಹುದ್ದೆಗಳಿಗೆ – ರೂ. 354/- ಅನ್ನು ಪಾವತಿಸಬೇಕು.

ಅರ್ಜಿ ಶುಲ್ಕ ಪಾವತಿ ವಿಧಾನ:
ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ಶುಲ್ಕವನ್ನು “ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ” ಈ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದೇಹವಾಗುವಂತೆ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಮೂಲಕ ಪಾವತಿಸಬೇಕು. (ಡಿಡಿಎ ಹಿಂಭಾಗದಲ್ಲಿ ಹೆಸರು, ಅರ್ಜಿ ಸಲ್ಲಿಸಿರುವ ಹುದ್ದೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

ಅರ್ಜಿ ಸಲ್ಲಿಕೆ ದಿನಾಂಕ:

 • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 03/07/2023
 • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17/07/2023 (ಸಂಜೆ 05 ಗಂಟೆಯೊಳಗೆ)

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Co-operative Bank Recruitment 2023 Bangalore

Co-operative Bank Recruitment 2023 Bangalore

People also ask

 • Is there any railway vacancy in Karnataka 2023?
 • What is the age limit for railway vacancy 2023?
 • What is the last date for railway recruitment 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment