ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘದಲ್ಲಿ ಖಾಲಿ ಇರುವ ಗುಮಾಸ್ತರು ಹಾಗೂ ಜವಾನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು.
ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ಪೂರ್ತಿಯಾಗಿ ಓದಿ ಹಾಗೂ ಆಸಕ್ತಿ ಹೊಂದಿದವರು ಜುಲೈ 08/2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಮೂಲಕ ಉದ್ಯೋಗಗಳನ್ನು ಹುಡುಕುತ್ತಿರುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ. ಹುದ್ದೆಯ ವಿವರಗಳು ಈ ಕೆಳಗಿನಂತಿವೆ.
Karnataka job alert:
ಹುದ್ದೆಯ ಹೆಸರು:-
ಗುಮಾಸ್ತರು – 3 ಹುದ್ದೆಗಳು ಖಾಲಿ ಇವೆ.
ಜವಾನ – 1 ಹುದ್ದೆ ಖಾಲಿ ಇವೆ.
ಒಟ್ಟು 4 ಹುದ್ದೆಗಳ ಬರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಆಸಕ್ತಿ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು.
ವಿದ್ಯಾರ್ಹತೆ:
ಗುಮಾಸ್ತರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
ಜವಾನ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು SSLC ವಿದ್ಯಾರ್ಹತೆಯನ್ನು ಪಡೆದಿರಬೇಕು.
ಭಾರತೀಯ ಕರಾವಳಿ ಭಧ್ರತಾ ಪಡೆಯಲ್ಲಿ 350 ಹುದ್ದೆಗಳಿಗೆ ಅರ್ಜಿ ಆಹ್ವಾನ .
Clcik:
https://infokannada.in/indian-coast-guard-recruitment-2021/
ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸೋದಕ್ಕೆ ಆಸಕ್ತ ಇರುವ ಅಭ್ಯರ್ಥಿಗಳು, ಅವರು ಕನಿಷ್ಠ 18 ವರ್ಷ ವಯೋಮಿತಿಯನ್ನು ನಿಗಧಿಪಡಿಸಲಾಗಿದೆ, ಮತ್ತು
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಪರಿಷ್ಠ ಜಾತಿ ಹಾಗೂ ಪರಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿಯನ್ನು ನಿಗಧಿಪಡಿಸಲಾಗಿದೆ.
ವೇತನ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ, ಅಂದರೆ
ಗುಮಾಸ್ತ ಹುದ್ದೆಗೆ – ರೂ.14,000 ನೀಡಲಾಗುವುದು.
ಜವಾನ ಹುದ್ದೆಗೆ -ರೂ.10,000ನೀಡಲಾಗುವುದು.
ಆಯ್ಕೆಯ ವಿಧಾನ:
ಗುಮಾಸ್ತ ಹುದ್ದೆಗೆ ಅರ್ಜಿಸಲ್ಲಿಸಿದಂತಹ ಪ್ರತಿ ಅಭ್ಯರ್ಥಿಗಳಿಗೂ ಕೂಡ ಲಿಖಿತ ಪರೀಕ್ಷೆ ನಡೆಸಿ , ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1 : 5 ಅನುಪಾತದಲ್ಲಿ ಮೌಖಿಕ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು .ಹಾಗೂ ಜವಾನ ಹುದ್ದೆಯ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರುವುದಿಲ್ಲ.
ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 12/06/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/7/2021
ಅರ್ಜಿ ನಮೂನೆ ಪಡೆಯುವ ವಿಧಾನ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ದಿನಾಂಕ 26/6/2021ರ ಒಳಗಾಗಿ ಸಂಘದ ಮುಖ್ಯ ಕಚೇರಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿ ಹತ್ತಿರ,ಹುಬ್ಬಳ್ಳಿ ರಸ್ತೆ, ಶಿರಸಿಯ ಕಛೇರಿಗೆ ಹಾಜರಾಗಿ ರೂ.500ಅನ್ನು ಪಾವತಿಸಿ ಅರ್ಜಿ ನಮೂನೆಯನ್ನು ಪಡೆಯಬಹುದು.
ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ 2021. 25,000 ರಿಂದ 40,000 ವರೆಗೂ ದ್ವಿತೀಯ ಪಿ.ಯು.ಸಿ ಉತ್ತೀರ್ಣರಿಗೆ ಉತ್ತಮ ಅವಕಾಶ. ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ:
https://infokannada.in/ksp-recruitment-2021/
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಸ್ವಹಸ್ತಾಕ್ಷರದಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು, ವಿದ್ಯಾರ್ಹತೆ , ಅನುಭವ ಹಾಗೂ ಇತರೆ ಪ್ರಮಾಣ ಪತ್ರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಶುಲ್ಕದ ಡಿಡಿ ಜೊತೆಗೆ ದಿನಾಂಕ 08 / 07 / 2021 ರ ಒಳಗಾಗಿ ಕಛೇರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
“ಅಧ್ಯಕ್ಷರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘ ನಿ. , ಶಿರಸಿ 581402 ಉತ್ತರ ಕನ್ನಡ” ಜಿಲ್ಲೆಗೆ ಈ ಒಂದು ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಶುಲ್ಕ:
ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸುವ ಪ.ಜಾತಿ / ಪ.ಪಂಗಡದವರು ರೂ . 1000 ಹಾಗೂ ಸಾಮಾನ್ಯ ವರ್ಗದವರು ರೂ . 2000 ಅನ್ನು ಪಾವತಿಸಬೇಕು. ಹಾಗು ಜವಾನ ಹುದ್ದೆಗೆ ರೂ .1000 ಡಿಡಿಯನ್ನು ಅಧ್ಯಕ್ಷರು , ವಾ.ಕ.ರ.ಸಾ. ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘ ನಿ . ಶಿರಸಿ ಇವರ ಹೆಸರಿಗೆ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
ಈ ಎಲ್ಲ ಅಧಿಸೂಚನೆಯನ್ನು ಓದಿದ ಬಳಿಕ , ನಿಮಗೆ ಈ ಹುದ್ದೆಯಲ್ಲಿ ಆಸಕ್ತಿ ಹೊಂದಿದ್ದರೆ ಅರ್ಜಿಯನ್ನು ಸಲ್ಲಿಸಬಹುದು. ಹಾಗು ಉದ್ಯೋಗ ಮಾಹಿತಿ ಮತ್ತು ಇತರೆ ಮಾಹಿತಿ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ ಜೊತೆ ಸದಾ ಸಂಪರ್ಕದಲ್ಲಿರಿ. ನಮ್ಮ ವಾಟ್ಸಪ್ ಗ್ರೂಪ್ ಅಲ್ಲೂ ಕೂಡ ಜಾಯಿನ್ ಆಗಿ.