ಗೃಹ ಜ್ಯೋತಿ ಯೋಜನೆ ಅರ್ಜಿ Online Application:Gruha Jyoti Scheme Karnataka Online Application

Gruha Jyoti Scheme Karnataka Online Application Details:

Gruha Jyoti Scheme Karnataka Online Application: ಕಾಂಗ್ರೆಸ್ ಸರ್ಕಾರವು 2023ರಲ್ಲಿ ಘೋಷಿಸಲಾಗಿರುವ 05 ಮಹತ್ವದ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆಯ ಒಂದಾಗಿದ್ದು, ಈ ಯೋಜನೆಗಳು ರಾಜ್ಯದಲ್ಲೆಡೆ ಬಾರಿ ಕುತೂಹಲವನ್ನು ಸೃಷ್ಟಿಸಿದೆ. ಈ ಗ್ರಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಸೌಕರ್ಯ ನೀಡಲಾಗುವುದು. ಇಂತಹ ಮಹತ್ವದ ಈ ಒಂದು ಯೋಜನೆಯು ಕಳೆದ ಜೂನ್ 18 ರಂದು ಅರ್ಜಿ ಸಲ್ಲಿಸಲು ಅಂದರೆ ನೋಂದಣಿ ಮಾಡಿಕೊಳ್ಳಲು ಪ್ರಾರಂಭವಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಈ ಯೋಜನೆಯ ಕೆಲವು ಷರತ್ತುಗಳು ಏನು? ಈ ಯೋಜನೆಯು ಎಲ್ಲಾ ಮನೆಗಳಿಗೂ ಅನ್ವಯಿಸುತ್ತದೆಯೇ? ಬಾಡಿಗೆ ಮನೆ ಅಥವಾ ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುತ್ತಿರುವ ಜನರಿಗೆ ಅನ್ವಯಿಸುತ್ತದಯೋ? ಎಂಬ ಎಲ್ಲಾ ಪ್ರಶ್ನೆಗೆ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಗೃಹ ಜ್ಯೋತಿ ಯೋಜನೆ ಅರ್ಜಿ Online Application:Gruha Jyoti Scheme Karnataka Online Application

ಗೃಹಜೋತಿ ಯೋಜನೆ ಅಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರನ್ವಯ) ಯೂನಿಟ್ ಗಳ ಮೇಲೆ ಶೇ.10% ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಮತ್ತು 200 ಯೂನಿಟ್ ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲವನು ಪಾವತಿಸಲು ಸರ್ಕಾರವು ಕೆಲವು ಷರತ್ತುಗಳೊಂದಿಗೆ ಜಾರಿಗೆಗೊಳಿಸಿದೆ. ಷರತ್ತುಗಳ ವಿವರ ಕೆಳಗೆ ನೀಡಲಾಗಿದೆ. ಅದೇ ರೀತಿ ಉದ್ಯೋಗ ಮಾಹಿತಿಯನ್ನು ತಿಳಿಯಲು All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ಷರತ್ತುಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.

ಬಾಡಿಗೆ ಅಥವಾ ಅಪಾರ್ಟ್ಮೆಂಟ್ ಮನೆಗಳಿಗೆ ಈ ಯೋಜನೆ ಅನ್ವಯಿಸುತ್ತದೆಯೋ?:

  • ಅಪಾರ್ಟ್ಮೆಂಟ್ ಗಳಲ್ಲಿ ವಾಸವಿರುವ ನಿವಾಸಿಗಳು ಈ ಯೋಜನೆಯಾನ್ನು ಪಡೆಯಬಹುದಾ ಎಂಬ ಪ್ರಶ್ನೆಗೆ ಉತ್ತರ “ಯಾವ ಮನೆಗಳಿಗೆ ಪ್ರತ್ಯೇಕವಾದ ಮೀಟರ್ ಇದೆಯೋ ಹಾಗೂ ಮೀಟರ್ ರೀಡಿಂಗ್ ಮಾಡಲಾಗುತ್ತಿದೆಯೋ ಅಂತಹ ಎಲ್ಲ ಮನೆಗಳಿಗೆ ಯೋಜನೆ ಅನ್ವಯಿಸುತ್ತದೆ”.
  • ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ, ಆ ವಾಸವಾಗಿರುವ ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ಆಧಾರ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಜೋಡಣೆ ಮಾಡಿ ನೋಂದಾಯಿಸುವ ಮೂಲಕ ಸೌಲಭ್ಯವನ್ನು ಪಡೆಯಬಹುದು.
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ಗೃಹ ಜ್ಯೋತಿ ಯೋಜನೆಯ ಕೆಲವು ಷರತ್ತುಗಳು: Gruha Jyoti Scheme Karnataka Online Application

  • 200 ಯೂನಿಟ್ ಗಳ ಬಳಕೆಯ ಮಿತಿಯನ್ನು ಯಾವುದಾದರೂ ತಿಂಗಳಲ್ಲಿ ಮೀರಿದ್ದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗುತ್ತದೆ.
  • 200 ಯೂನಿಟ್ ಗಳ ಒಳಗೆ ಬಿಲ್ ಆಗಿದ್ದಲ್ಲಿ, ಅಂತಹ ಮನೆಗಳಿಗೆ ಶೂನ್ಯ ಬಿಲ್ಲನ್ನು ನೀಡಲಾಗುವುದು.
  • ಈ ಗ್ರಹ ಜ್ಯೋತಿ ಯೋಜನೆಯು, ಗೃಹಬಳಕೆಯ ವಿದ್ಯುತ್ ಸಂಪರ್ಕಗಳನ್ನು ಹೊರತು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಅನ್ವಯವಾಗುವುದಿಲ್ಲ.
  • ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ ಅಥವಾ ಕುಟಿರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಗ್ರಹ ಜ್ಯೋತಿ ಯೋಜನೆ ಅಡಿಯಲ್ಲಿ ಸೇರ್ಪಡಿಸಲಾಗುವುದಿಲ್ಲ.
  • ಗ್ರಹ ವಿದ್ಯುತ್ ಬಳಕೆದಾರನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮೀಟರ್ ಗಳಿದ್ದರೆ, ಆ ಮೀಟರ್ ಗಳಿಗೆ ಈ ಯೋಜನೆ
  • ಈ ಯೋಜನೆಯನ್ನು ಪಡೆಯುವ ಪ್ರತಿಯೊಬ್ಬ ವ್ಯಕ್ತಿಯು “Account ID/Connection ID” ಅನ್ನು ಆಧಾರ್ ಕಾರ್ಡ್ ಜೊತೆ ಕಡ್ಡಾಯವಾಗಿ ಜೋಡಣೆ ಮಾಡಬೇಕು.
  • ಈ ಯೋಜನೆಯನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಮೊದಲು ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ಗ್ರಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?: (Gruha Jyoti Scheme Karnataka Online Application):

ಗ್ರಹ ಜ್ಯೋತಿ ಯೋಜನೆಯ ಎಲ್ಲಾ ಗ್ರಾಹಕರು ಸೇವಾ ಆನ್ಲೈನ್ ಮೂಲಕ ಸೇವಾ ಸಿಂಧು ವೆಬ್ ಸೈಟಿಗೆ ಭೇಟಿ ನೀಡಿ ಖುದ್ದಾಗಿ ಮೊಬೈಲ್/ಲಾಪ್ ಟಾಪ್/ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಕೂಡ ಅರ್ಜಿ ಸಲ್ಲಿಸಬಹುದು. ಅಥವಾ ನಾಡಕಛೇರಿ, ಗ್ರಾಮ ಪಂಚಾಯಿತಿ ಕಚೇರಿ, ವಿದ್ಯುತ್ ಕಚೇರಿಗಳಿಗೆ ಭೇಟಿ ನೀಡಿ ಕೂಡ ಅರ್ಜಿ ಸಲ್ಲಿಸಬಹುದು.

ಗೃಹ ಜ್ಯೋತಿ ಯೋಜತೆ ಆನ್ಲೈನ್ ಅರ್ಜಿ ಸಲ್ಲಿಕೆ/ನೊಂದಣಿ ವಿಧಾನ: (Gruha Jyoti Scheme: How to Apply Online):

  • ಮೊದಲು ಅಭ್ಯರ್ಥಿಗಳು ಕರ್ನಾಟಕ ಸರ್ಕಾರ “ಸೇವಾ ಸಿಂಧು” ವೆಬ್ಸೈಟ್ ಗೆ ಭೇಟಿ ನೀಡಬೇಕು. ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ. (ವೆಬ್ಸೈಟ್ ಗೆ ಲಾಗಿನ್ ಕೇಳಿದ್ದಲ್ಲಿ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿಕೊಳ್ಳಿರಿ)
  • ವೆಬ್ಸೈಟ್ ಅನ್ನು ತೆರೆದ ಬಳಿಕ, ಅಲ್ಲಿ ಹಲವು ಯೋಜನೆಗಳು ಕಾಣಿಸಿಕೊಳ್ಳುತ್ತದೆ, ಅಲ್ಲಿ “ಗೃಹ ಜ್ಯೋತಿ” ಯಾಜನೆಯ ಮೇಲೆ ಕ್ಲಿಕ್ ಮಾಡಿದ ಬಳಿಕ, ಒಂದು ಆನ್ಲೈನ್ ಅರ್ಜಿ/ಫಾರಂ ತೆರೆದುಕೊಳ್ಳುತ್ತದೆ.
  • ನಂತರ, ಆ ಅರ್ಜಿಯಲ್ಲಿ “Account ID/Connection ID” (ಇದು ಎಲ್ಲಾ ಕರೆಂಟ್ ಬಿಲ್ ಗಳಲ್ಲಿ ನಮೂದಿಸಲಾಗಿರುತ್ತದೆ.), Holder Name in ESCOM (ವಿದ್ಯುತ್ ಬಳಕೆದಾರನ ಹೆಸರು, ESCOM Name (ಎಸ್ಕಾಂ ಹೆಸರು) , Adhar Number(ಆಧಾರ್ ಸಂಖ್ಯೆ), Mobile No. (ಮೊಬೈಲ್ ಸಂಖ್ಯೆ) ” ಗಳನ್ನು ಭರ್ತಿ ಮಾಡಿರಿ.
  • ಜೊತೆಗೆ ಅಲ್ಲಿ “Types of occupancy” ನಲ್ಲಿ, ಸ್ವಂತ ಮಾಲಿಕ ಅಥವ ಬಾಡಿಗೆದಾರರಾಗಿದ್ದರೆ ಅಲ್ಲಿ ಉಲ್ಲೇಖಿಸಿ.
  • ಕೊನೆಯಲ್ಲಿ “I Agree” ಅನ್ನೋ ಘೋಷಣೆ ಮೇಲೆ ಕ್ಲಿಕ್(ಟಿಕ್) ಮಾಡಿರಿ.
  • ಬಳಿಕ “Submit” ಮೇಲೆ ಕ್ಲಿಕ್ ಮಾಡಿ, ಅರ್ಜಿ ಸಲ್ಲಿಸಿ.


ಗೃಹಜ್ಯೋತಿ ಯೋಜನೆ (online application link)/ ಸೇವಾ ಸಿಂಧು ವೆಬ್ಸೈಟ್ ಲಿಂಕ್ : (Gruha Jyoti Scheme Karnataka Online Application)

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

ಗೃಹಜ್ಯೋತಿ ಯೋಜನೆ ಅರ್ಜಿ Online Application:Gruha Jyoti Scheme Karnataka Online Application

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment