ಸುಲಭದಲ್ಲೇ ಫಿಟ್ ಇಂಡಿಯಾ ಚಳುವಳಿ ಕ್ವಿಜ್ ನಲ್ಲಿ 25ಲಕ್ಷ ಬಹುಮಾನ ಗೆಲ್ಲಿರಿ

ಭಾರತದ  ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ  ಫಿಟ್ ಇಂಡಿಯಾ ಚಳುವಳಿ 2021ರ ಅಂಗವಾಗಿ ಭಾರತದ ಕ್ರೀಡಾ ಪ್ರಾಧಿಕಾರವು ರಸಪ್ರಶ್ನೆಯನ್ನು ಆಯೋಜಿಸಿದೆ. ಇದರ ಅನುಸಾರ ಈ ರಸಪ್ರಶ್ನೆಯೂ ಎಲ್ಲಾ ಶಾಲಾ, ಪ್ರಾಥಮಿಕ, ರಾಜ್ಯ ಹಾಗೂ ರಾಷ್ಟ್ರೀಯ ಹಂತದ ಒಟ್ಟು ನಾಲ್ಕು ಸುತ್ತಿನಲ್ಲಿ ನಡೆಯಲಿದೆ.
ಈ ರಸಪ್ರಶ್ನೆಗಾಗಿ ನೋಂದಣಿ ಪ್ ಪ್ರಕ್ರಿಯೆಯು ಜುಲೈ 1 ಪ್ರಾರಂಭವಾಗಲಿದ್ದು ಹಾಗೂ ಜುಲೈ 31ಕೊನೆಯ ದಿನವಾಗಿರುತ್ತೆ. ಈ ಒಂದು ರಸಪ್ರಶ್ನೆಯಲ್ಲಿ ಭಾಗವಹಿಸಿ ಗೆಲ್ಲುವ ವಿದ್ಯಾರ್ಥಿಗಳಿಗೆ 3 ಕೋಟಿಗಿಂತಲೂ ಹೆಚ್ಚಿನ ಮೌಲ್ಯದ ನಗದು ಬಹುಮಾನಗಳನ್ನು ನೀಡಲಾಗುತ್ತೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಎಲ್ಲಾ ಅಂಗಸಂಸ್ಥೆ ಶಾಲೆಗಳಲ್ಲಿ ಗರಿಷ್ಟ ಭಾಗವಹಿಸಬೇಕಾಗಿ ಕೋರಿಕೆ ಇಟ್ಟಿದೆ.

ಫಿಟ್ ಇಂಡಿಯಾ ಚಳುವಳಿ ಕ್ವಿಜ್ ಬಹುಮಾನ :

National Testing Agency (NTA)ವು ಪ್ರಾಥಮಿಕ ಸುತ್ತನ್ನು ಸೆಪ್ಟೆಂಬರ್ 4 ರಂದು ಆನ್‌ಲೈನ್ ಮೂಲಕ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ನಡೆಸಲಿದೆ. ಬಳಿಕ ರಾಜ್ಯ ಸುತ್ತನ್ನು ಅಕ್ಟೋಬರ್‌ನಲ್ಲೂ ಹಾಗೂ ರಾಷ್ಟ್ರೀಯ ಸುತ್ತಿನ ಕಾರ್ಯಕ್ರಮವನ್ನು ನವೆಂಬಲ್ ನಲ್ಲಿ ನಡೆಸಲು ನಿಗದಿಪಡಿಸಿದೆ.

ರಾಷ್ಟ್ರೀಯ ಸುತ್ತಿನ ರಸಪ್ರಶ್ನೆ ಕಾರ್ಯಕ್ರಮವು ಕ್ವಾರ್ಟರ್-ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಒಳಗೊಂಡಿದ್ದು . ರಾಷ್ಟ್ರೀಯ ಚಾಂಪಿಯನ್ ತಂಡವು 2,50,000 ರೂ.ಗಳ ಬಹುಮಾನವನ್ನು ಹಾಗೂ ಅವರ ಶಾಲೆಯು 25 ಲಕ್ಷ ರೂ ಬಹುಮಾನವನ್ನು ಪಡೆದುಕೊಳ್ಳುವ ಅವಕಾಶವಿದೆ.

ಮೊದಲ ರನ್ನರ್ ಅಪ್ ಆದ ತಂಡಕ್ಕೆ 1,50,000 ರೂ. ಮತ್ತು ಆ ಶಾಲೆಗೆ 15 ಲಕ್ಷ ರೂ ನೀಡಲಿದೆ. ಅದೇ ರೀತಿ ಎರಡನೇ ರನ್ನರ್ ತಂಡವು 1 ಲಕ್ಷ ರೂ. ಮತ್ತು ಶಾಲೆಯು 10 ಲಕ್ಷ ರೂ ಬಹುಮಾನವನ್ನು ಪಡೆದುಕೊಳ್ಳಲಾಗುತ್ತೆ.

ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ 2021. 25,000 ರಿಂದ 40,000 ವರೆಗೂ ದ್ವಿತೀಯ ಪಿ.ಯು.ಸಿ ಉತ್ತೀರ್ಣರಿಗೆ ಉತ್ತಮ ಅವಕಾಶ
Click: https://infokannada.in/ksp-recruitment-2021/

ರಾಜ್ಯ ಸುತ್ತಿನಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸುವ ತಂಡಗಳು ಮತ್ತು ಅವರ ಶಾಲೆಗಳಿಗೆ ನಗದು ಬಹುಮಾನವನ್ನು ನೀಡಲಾಗುತ್ತೆ. ಪ್ರಾಥಮಿಕ ಅಥವಾ ಎನ್‌ಟಿಎ ನಡೆಸುವ ಸುತ್ತಿನಲ್ಲಿ ರಾಜ್ಯ ಸುತ್ತಿಗೆ ಅರ್ಹತೆ ಪಡೆದವರಿಗೆ ಕೂಡ ನಗದು ಬಹುಮಾನ ಇರುತ್ತದೆ. ಈ ಮೂಲಕ ಈ ಒಂದು ರಸಪ್ರಶ್ನೆಯಲ್ಲಿ ಭಾಗವಹಿಸುವುದರ ಮೂಲಕ ದೊಡ್ಡ ಮೊತ್ತದ ಬಹುಮಾನವನ್ನು ಗೆಲ್ಲುವ ಉತ್ತಮ ಅವಕಾಶವಾಗಿದೆ ಇದು.

ಫಿಟ್ ಇಂಡಿಯಾ ಚಳುವಳಿಯ ಈ ರಸಪ್ರಶ್ನೆ ಹೇಗಿರುತ್ತೆ

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಗೂ ಫಿಟ್ ಇಂಡಿಯಾ ಮಿಷನ್ ಫಿಟ್ ಇಂಡಿಯಾ ರಸಪ್ರಶ್ನೆಯನ್ನು ಹುಟ್ಟುಹಾಕಿದೆ. ಇದರ ಅನುಸಾರ ಫಿಟ್‌ನೆಸ್ ಮತ್ತು ಕ್ರೀಡೆಗಳ ಬಗ್ಗೆ ಶಾಲಾ ಮಕ್ಕಳಿಗೆ ಕೇಳಲಾಗುವ ಮೊದಲ ರಾಷ್ಟ್ರವ್ಯಾಪಿ ರಸಪ್ರಶ್ನೆ ಕಾರ್ಯಕ್ರಮ ಎಂದು ನಂಬಲಾಗಿದೆ. 8 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಯ ವಿದ್ಯಾರ್ಥಿಗಳಿಗೆ ಸುಲಭವಾಗಿ ಉತ್ತರಿಸುವ ರೀತಿಯಲ್ಲಿ ಪ್ರಶ್ನೆಗಳನ್ನು ವಿನ್ಯಾಸಗೊಳಿಸಲಾಗುವುದು.ಹಾಗೂ ಈ ರಸಪ್ರಶ್ನೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಈ ರಸಪ್ರಶ್ನೆಯು ಪ್ರಾಥಮಿಕವಾಗಿ ವಿದ್ಯಾರ್ಥಿಗಳ ಫಿಟ್‌ನೆಸ್ ಮತ್ತು ಕ್ರೀಡಾ ಜ್ಞಾನವನ್ನು ತಮ್ಮ ಗೆಳೆಯರೊಂದಿಗೆ ಪರೀಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬೃಹತ್ ನೇಮಕಾತಿ, 19,000 ರಿಂದ 50,000 ವರೆಗೂ ವೇತನ click :

https://infokannada.in/western-railway-recruitment-2021/

ಫಿಟ್ ಇಂಡಿಯಾ ರಸಪ್ರಶ್ನೆ: ನೋಂದಾಯಿಸುವುದು ಹೇಗೆ?:

ಫಿಟ್ ಇಂಡಿಯಾ ರಸಪ್ರಶ್ನೆ ನೋಂದಣಿಗೆ ಶಾಲೆಗಳಿಗೆ ಅಧಿಕಾರವಿದೆ. ಶಾಲೆಗಳು ಪ್ರಾಥಮಿಕ ಸುತ್ತನ್ನು ನಡೆಸಬೇಕು ಮತ್ತು ರಸಪ್ರಶ್ನೆಗಾಗಿ ಕನಿಷ್ಠ 2 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ನಂತರ ಕನಿಷ್ಟ 2 ವಿದ್ಯಾರ್ಥಿಗಳನ್ನು ಫಿಟ್ ಇಂಡಿಯಾ ವೆಬ್‌ಸೈಟ್‌ನಲ್ಲಿ (https://fitindia.gov.in) ನೋಂದಾಯಿಸಬೇಕು. ನೋಂದಣಿ ಸಮಯದಲ್ಲಿ ಪ್ರತಿ ವಿದ್ಯಾರ್ಥಿಗೆ 250/-ರೂ ನೊಂದಣಿ ಶುಲ್ಕವನ್ನು ಶಾಲೆಯಿಂದ ಪಾವತಿಸಲಾಗುವುದು.

Leave a Comment