ಕರ್ನಾಟಕ ಸರ್ಕಾರದಿಂದ ಹೊಸ ಆರೋಗ್ಯ ಇಲಾಖೆ ನೇಮಕಾತಿಯು ಇದೀಗ ಪ್ರಕಟವಾಗಿದೆ. ಆರೋಗ್ಯ ಇಲಾಖೆಯಲ್ಲಿ ಆಸಕ್ತಿ ಹೊಂದಿದವರಿಗೆ ಇದು ಉತ್ತಮ ಅವಕಾಶ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಬಂದಿರುವಂತಹ ಅಧಿಕೃತ ಮಾಹಿತಿಯಾಗಿದೆ.
ಕೋವಿಡ್-19 ರೋಗಿಗಳನ್ನು ನಿರ್ವಹಿಸಲು ಅವಶ್ಯಕವಿರುವ ಅಧಿಕಾರಿ ಅಥವಾ ಸಿಬ್ಬಂದಿಗಳ ಹುದ್ದೆಗಾಗಿ 3 ತಿಂಗಳ ಅವಧಿಗೆ ವಾಕ್ ಇನ್ ಪ್ರಕ್ರಿಯೇ ಮೂಲಕ ಸೇವೆಯನ್ನು ಪಡೆಯಲು ನಿರ್ಧರಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಗೊಳ್ಳಿ ರಾಯಣ್ಣ ಕೋವಿಡ್ ಅಸ್ಪತ್ರೆ, ಬಿಬಿಎಂಪಿ ವಾರ್ಡ್ ನಂ.126, ಜೆಕೆ ಡಬ್ಲ್ಯು ಲೇಔಟ್, 4ನೇ ಅಡ್ಡ ರಸ್ತೆ, ಸಂಗೊಳ್ಳಿ ರಾಯಣ್ಣ ಸ್ಟೇಡಿಯಂ ಕಾಂಪ್ಲೆಕ್ಸ್, ಬೆಂಗಳೂರು-560040.
ಹಾಗಾದರೆ ಯಾವೆಲ್ಲಾ ಉದ್ದೆಗಳ ನೇಮಕಾತಿ ಇದೆ ಅನ್ನೋದನ್ನು ನೋಡೋಣ. ಅದೇ ರೀತಿ ಈ ರೀತಿ ಹುದ್ದೆಗಳು , ಸರ್ಕಾರದ ಸ್ಕೀಮ್ ಗಳು ಹಾಗೂ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ಸದಾ ನಮ್ಮ ವೆಬ್ಸೈಟ್ ಜೊತೆಗೆ ಸಂಪರ್ಕದಲ್ಲಿರಿ.
ಆರೋಗ್ಯ ಇಲಾಖೆ ನೇಮಕಾತಿ 2021:
ಹುದ್ದೆಯ ಹೆಸರು:-
1.ಅರವಳಿಕೆ ತಜ್ಞ – ( 4 ಖಾಲಿ ಹುದ್ದೆಗಳು )
ವೇತನ ( ಪ್ರತೀ ತಿಂಗಳಿಗೆ ):- 1,10,000 /- = ( ಹೆಚ್ಚುವರಿ ( ರೂ . 20,000 / – ಕೋವಿತ್ ಭತ್ಯೆ ) = ರೂ . 1,30,000 /-
ವಿದ್ಯಾರ್ಹತೆ:- ಅರಿವಳಿಕೆ ತಜ್ಞ ಸಂಸ್ಥೆಯಿಂದ ಮಾನ್ಯತೆ ಪಡೆದ ಸ್ನಾತಕೋತ್ತರ ಪದವಿ / ಡಿಪ್ಲೊಮ / ಡಿಎನ್‌ಬಿ ಪಡೆದಿರಬೇಕು.
2.ಜನರಲ್ ಫೀಸಿಶಿಯನ್ (3 ಖಾಲಿ ಹುದ್ದೆಗಳು)
ವೇತನ ( ಪ್ರತೀ ತಿಂಗಳಿಗೆ ):- 1,10,000 /- ( ಹೆಚ್ಚುವರಿ || ರೂ . 20,000 / = ಕೊವಿಡ್ ಭತ್ಯೆ ) = ರೂ . 130,000
ವಿದ್ಯಾರ್ಹತೆ:- ಜನರಲ್ ಮೆಡಿಸಿನ್‌ನಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಮಾನ್ಯತೆಪಡೆದ ಸ್ನಾತಕೋತ್ತರ ಪದವಿ/ ಡಿಎನ್‌ಜಿ ಪಡೆದಿರಬೇಕು .
https://infokannada.in/brand-ksrtc-is-now-officially-belongs-to-kerala
3.ಎಂಬಿಬಿಎಸ್ ಡಾಕ್ಟರ್ಸ್ (20 ಖಾಲಿ ಹುದ್ದೆಗಳು)
ವೇತನ ( ಪ್ರತೀ ತಿಂಗಳಿಗೆ ):- 1,10,000 /- ( ಹೆಚ್ಚುವರಿ || ರೂ . 20,000 / = ಕೊವಿಡ್ ಭತ್ಯೆ ) = ರೂ . 130,000
ವಿದ್ಯಾರ್ಹತೆ:- ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಮಾನ್ಯತೆ ಪಡೆದ ಎಂಬಿಬಿಎಸ್ ಪದವಿ ಪಡೆದಿರಬೇಕು.
4.ಸ್ಟಾಫ್ ನರ್ಸ್ (40 ಖಾಲಿ ಹುದ್ದೆಗಳು)
ವೇತನ ( ಪ್ರತೀ ತಿಂಗಳಿಗೆ ):-ರೂ .20,000 + 10,000 ( ಕೊವಿಡ್ ಭತ್ಯೆ )
ವಿದ್ಯಾರ್ಹತೆ:- ನರ್ಸಿಂಗ್‌ನಲ್ಲಿ ಕರ್ನಾಟಕ ನರ್ಸಿಂಗ್ ಸಂಸ್ಥೆಯಿಂದ ಮಾನ್ಯತೆ ಪಡೆದ ಬಿಎಸ್ಸಿ / ಜಿಎನ್‌ಎಂ / ಡಿಪ್ಲೋಮಾ ಪಡೆದಿರಬೇಕು .
ಚೀನಾ ಸರ್ಕಾರ (Three Child Policy)ಯನ್ನು ಜಾರಿಗೆ ತಂದಿದ್ದು ಯಾಕೆ?https://infokannada.in/chinees-government-announced-now-three-child-policy
5.ಡಾಟಾ ಎಂಟ್ರಿ ಆಪರೇಟರ್ (3 ಖಾಲಿ ಹುದ್ದೆಗಳು)
ವೇತನ ( ಪ್ರತೀ ತಿಂಗಳಿಗೆ ):-ರೂ .18000/-
ವಿದ್ಯಾರ್ಹತೆ:- ದ್ವಿತೀಯ ಪಿಯುಸಿಯೊಂದಿಗೆ ಕಂಪ್ಯೂಟರ್ ಡಿಪ್ಲೊಮಾ
6.ಲ್ಯಾಬ್ ಟೆಕ್ನಿಷಿಯನ್ (3 ಖಾಲಿ ಹುದ್ದೆಗಳು)
ವೇತನ ( ಪ್ರತೀ ತಿಂಗಳಿಗೆ ):- ರೂ .15,000+ 10,000 ( ಕೋವಿಡ್ ಛತ್ರೆ )
ವಿದ್ಯಾರ್ಹತೆ:- ಡಿಎಂಎಲ್
7.ಫಾರ್ಮಸಿಸ್ಟ್ (2 ಖಾಲಿ ಹುದ್ದೆಗಳು)
ವೇತನ ( ಪ್ರತೀ ತಿಂಗಳಿಗೆ ):- ರೂ.15,000/-
ವಿದ್ಯಾರ್ಹತೆ:- ಕರ್ನಾಟಕ ಫಾರ್ಮೆಸಿ ಕೌನ್ಸಿಲ್‌ನಿಂದ ಮಾನ್ಯತೆಪಡೆದ ಡಿ ಫಾರ್ಮಾ | ಬಿ ಫಾರ್ಮಾ | ಎಂ ಫಾರ್ಮಾ ಪಡೆದಿರಬೇಕು.
ಉದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05.06.2021 , ಶನಿವಾರ , ಸಂದರ್ಶನ ನಡೆಯುವ ಸ್ಥಳ : ದಾಸಪ್ಪ ಆಸ್ಪತ್ರೆ ಮೀಟಿಂಗ್ ಹಾಲ್ , 1 ನೇ ಮಹಡಿ ಟೌನ್ ಹಾಲ್ ಹತ್ತಿರ , ಸಮಯ : 10:00 ರಿಂದ ಸಂಜೆ 4:30 ಗಂಟೆ . ಅರ್ಹ ಅಭ್ಯರ್ಥಿಗಳು ಸಂಬಂಧಿಸಿದ ದಾಖಲೆಗಳೊಂದಿಗೆ ಪಟ್ಟಿಯಲ್ಲಿ ಸೂಚಿಸಿರುವ ಸ್ಥಳ ಮತ್ತು ದಿನಾಂಕದಂದು ವಾಕ್ ಇನ್ -ಪ್ರಕ್ರಿಯೆಗೆ ಹಾಜರಾಗಲು ಸೂಚಿಸಲಾಗಿದೆ . ಮೇಲ್ಕಂಡ ಹುದ್ದೆಗಳ ಸಂಖ್ಯೆಗಳನ್ನು ಹೆಚ್ಚಿಸುವ / ಕಡಿತಗೊಳಿಸುವ ಅಧಿಕಾರವನ್ನು ಮುಖ್ಯ ಆಯುಕ್ತರು , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆರವರು ಹೊಂದಿರುತ್ತಾರೆ . ಎಲ್ಲಾ ಹುದ್ದೆಗಳು ಕೇವಲ ತಾತ್ಕಾಲಿಕ ಆಧಾರದಲ್ಲಿ ಮಾತ್ರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 080-22975766