ನಮ್ಮ ಕರ್ನಾಟಕಕ್ಕೆ ಬಹುದೊಡ್ಡ ಸೋಲು ಎನ್ನುವ ರೀತಿ, ಕೆಎಸ್ಆರ್ಟಿಸಿ ಪದ ಬಳಕೆಗೆ ಸಂಬಂಧಿಸಿ ಕಳೆದ 7 ವರ್ಷಗಳ ಕಾಲ ನಡೆದ ಕಾನೂನು ಸಮರದಲ್ಲಿ ಇದೀಗ ನಮ್ಮ ಕರ್ನಾಟಕ ರಾಜ್ಯವು ಸೋಲನ್ನು ಕಂಡಿದೆ.
ಕರ್ನಾಟಕ ಸರ್ಕಾರ ಹೇಗೆ ತನ್ನ ಸರ್ಕಾರಿ ಬಸ್ಸುಗಳನ್ನು ‘ಕೆಎಸ್ಆರ್ ಟಿಸಿ’ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ), ಅದೇ ರೀತಿ ಇನ್ನು ಮುಂದೆ ಕೇರಳ ಸರ್ಕಾರವು ತನ್ನ ಬಸ್ಸುಗಳನ್ನು ‘ಕೆಎಸ್ಆರ್ ಟಿಸಿ’ ಅಂದರೆ (ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ) ಎಂದು ಕೆರೆಯುತ್ತಿತ್ತು. ಹೀಗಾಗಿ ಈ ‘ಕೆಎಸ್ಆರ್ ಟಿಸಿ’ ಟ್ರೇಡ್ ಮಾರ್ಕ್ ನಮ್ಮದು ಎಂದು ಈ ಎರಡೂ ರಾಜ್ಯಗಳು 2013ರಲ್ಲೇ ವಾದಿಸತೊಡಗಿತ್ತು.
2014ರಲ್ಲಿ ಕೆರಳವು ‘ಕೆಎಸ್ಆರ್ಟಿಸಿ’ ಪದವನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ನೋಟಿಸ್ ಕಳುಹಿಸಿತ್ತು, ಆದರೆ 2014ರಲ್ಲೇ ಕರ್ನಾಟಕ ಸರ್ಕಾರವು ಈ ಟ್ರೇಡ್ ಮಾರ್ಕ್ ನ ಜೊತೆಗೆ, ಆ ಎರಡು ತಲೆಯ ಪೌರಾಣಿಕ ಪಕ್ಷಿಯ ಲಾಂಛನವನ್ನು ನೋಂದಾಯಿಸಿ ಮಾಲೀಕತ್ವವನ್ನು ಗಳಿಸಿತ್ತು. ನಂತರ ಕೇರಳ ಸರ್ಕಾರವು, ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಗೆ ಒಂದು ಮನವಿ ಸಲ್ಲಿಸಿತ್ತು. ಮಾಜಿ ಕೆಎಸ್ಆರ್ ಟಿಸಿ’ ಎಂ.ಡಿ ಆಂಟನಿ ಚಾಕೊ ಅವರು ಕೇರಳದ ಬ್ರಾಂಡ್ ಆದ ಈ ಟ್ರೇಡ್ ಮಾರ್ಕ್ ಹೆಸರನ್ನು ಮರಳಿ ಪಡೆಯುವುದಕ್ಕೆ ಕಾನೂನು ಹೋರಾಟವನ್ನು ಪ್ರಾರಂಭಿಸಿದರು. ಈಗೆ ಈ ಎರಡೂ ರಾಜ್ಯಗಳ ಸತತ 7 ವರ್ಷಗಳ ಕಾನೂನು ಹೋರಾಟದ ತೀರ್ಪು ಅಂತಿಮವಾಗಿ ಕೇರಳದ ಪರವಾಗಿ ನಿಂತಿದೆ.
ಹೌದು, ಇನ್ನು ಮುಂದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳನ್ನು ‘ ಕೆಎಸ್ಆರ್ ಟಿಸಿ ‘ ಎಂದು ಕರೆಯುವ ಅಧಿಕಾರವು ನಮ್ಮ ಕೈಯಿಂದ ಬಿಟ್ಟುಹೋಗಿದೆ. ‘ಕೆಎಸ್ಆರ್ ಟಿಸಿ ‘ ಪದವು ಇನ್ನು ಮುಂದೆ ಕೇರಳಕ್ಕೆ ಸಂಬಂಧಿಸಿದ್ದು ಎಂದು ಟ್ರೇಡ್ ಮಾರ್ಕ್ ರಿಜಿಸ್ಪಿ ತೀರ್ಪು ನೀಡಿದೆ. ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯ ಪ್ರಕಾರ, ಈ ‘ಕೆಎಸ್ಆರ್ಟಿಸಿ’ ಟ್ರೇಡ್ ಮಾರ್ಕ್ ಅನ್ನು ಇನ್ನು ಮುಂದೆ ಕೇರಳಕ್ಕೆ ಬಿಟ್ಟುಕೊಡಬೇಕೆಂದು ಟ್ರೇಡ್ ಮಾರ್ಕ್ ರಿಜಿಸ್ಟ್ರಿಯು ತೀರ್ಪು ನೀಡಿದೆ. ಜೊತೆಗೆ, ಕೇರಳ ಸರ್ಕಾರವು ಈ ಕೆಎಸ್ಆರ್ಟಿಸಿ ಲಾಂಛನ ಹಾಗೂ ಸಾರಿಗೆ ಸೇವೆಗೆ ಇಟ್ಟಿರುವ ‘ಆನವಂಡಿ‘ ಎಂಬ ಹೆಸರು ಕೂಡ ಕೇರಳದ ಸೊತ್ತು ಎಂದು ತೀರ್ಪು ನೀಡಿದೆ. “ಈ ಒಂದು ವಿಷಯ ಕೇರಳದ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದ್ದು, ಇನ್ನು ಅಧಿಕೃತವಾಗಿ ಯಾವುದೇ ನೋಟಿಸ್ ದೊರಕಿಲ್ಲ. ತೀರ್ಪಿನ ಯಾವುದೇ ಪ್ರತಿಯೂ ದೊರಕಿಲ್ಲ”, ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ ಅವರು ತಿಳಿಸಿದ್ದಾರೆ.