ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಆಪಲ್ ನಿಂದ ಭಾರತದಲ್ಲಿ 23,000 ಉದ್ಯೋಗ ಸೃಷ್ಟಿ

ಭಾರತದಲ್ಲಿ ಆಪಲ್ ಕಂಪೆನಿಯ ಉಪಸ್ಥಿತಿಯು ಬೆಳೆಯುತ್ತಾ ಇದ್ದಹಾಗೆ, ಅದರ ಉದ್ಯೋಗವಕಾಶಗಳು ಕೂಡ ಹೆಚ್ಚಾಗುತ್ತಿದೆ. ಡಿಜಿಟೈಮ್ಸ್ ಏಷ್ಯಾದ ವರದಿಯ ಪ್ರಕಾರ, ಆಪಲ್ ಇದುವರೆಗೆ ಸುಮಾರು 20,000 ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ತಿಳಿಸಿದೆ.

ಭಾರತ ಸರ್ಕಾರದಿಂದ ಉತ್ತೇಜನ ಸಿಕ್ಕ ಬೆನ್ನಲ್ಲೇ ತನ್ನ ಪೂರೈಕೆಯನ್ನು ಇನ್ನು ದೊಡ್ಡಮಟ್ಟದಲ್ಲಿ ಸ್ಥಳಾಂತರ ಮಾಡಿಕೊಳ್ಳುತ್ತಿದೆ ಆಪಲ್.

ಈ COVID-19 ವೈರಾಣುವಿನಿಂದ ಜಗತ್ತಿನ ಸಣ್ಣ ಪುಟ್ಟ ಕಂಪೆನಿಗಳಿಂದ ಹಿಡಿದು ದೊಡ್ಡ ಕಂಪೆನಿಗಳಿಗೂ ಕೂಡ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಅಂತಹ ಕಂಪೆನಿಗಳ ಪಟ್ಟಿಯಲ್ಲಿ ಆಪಲ್ ಕಂಪೆನಿಯೂ ಕೂಡ ಒಂದು. ಈ ಸಾಂಕ್ರಾಮಿಕದ ಏಟು ಇಲ್ಲದೆ ಹೋಗಿದ್ದಿದ್ದರೆ ಈ ವೇಳೆಗೆ ಭಾರತದಲ್ಲಿ ಆಪಲ್ ಕಂಪನಿಯ ಉದ್ಯೋಗ ದರ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ವರದಿಯು ಹೇಳುತ್ತದೆ. ಭಾರತವು ದೇಶಾದ್ಯಂತ ಹೊಸ ಸೋಂಕಿನ ಅಲೆಗಳನ್ನು ಕಂಡಿದ್ದು, ಕಾರ್ಮಿಕರ ಕೊರತೆ ಹಾಗೂ ನಿರುದ್ಯೋಗದ ದರವು ಇನ್ನು ಹೆಚ್ಚಾಗಿ ಹೋಗಿದೆ.

2022ರಲ್ಲಿ 23,000ಉದ್ಯೋಗ ಸೃಷ್ಟಿ:

2022ರಲ್ಲಿ 23,000ಉದ್ಯೋಗ ಸೃಷ್ಟಿ

ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಎಂಬ ಸಬ್ಸಿಡಿ ಕಾರ್ಯಕ್ರಮದ ಮೂಲಕ ಉತ್ಪಾದನೆಯನ್ನು ಸರಿಸಲು ಹೆಚ್ಚಿನ ಕಂಪನಿಗಳಿಗೆ ಭಾರತ ಕೆಲವು ಪ್ರೋತ್ಸಾಹ ನೀಡಿದೆ. ಫಾಕ್ಸ್‌ಕಾನ್, ವಿಸ್ತ್ರಾನ್ ಹಾಗೂ ಪೆಗಟ್ರಾನ್‌ ಕಂಪೆನಿಗಳು ನಿರ್ದಿಷ್ಟ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಲು ತಯಾರಾಗಿದ್ದಾರೆ.


ಪ್ರತಿ ಕಂಪನಿಯು ಮಾರ್ಚ್ 2022 ರ ವೇಳೆಗೆ ಸುಮಾರು 23,000 ಜನರಿಗೆ ಉದ್ಯೋಗವಕಾಶವನ್ನು ಒದಗಿಸಲು ಮುಂದೆ ಬಂದಿದೆ.

ಪಿಯುಸಿ ಉತ್ತೀರ್ಣ ಹೊಂದಿದವರಿಗೆ ಉತ್ತಮ ಅವಕಾಶ. 400 ಉದ್ದೆಗಳು🔥click :-👇👇👇👇👇👇https://infokannada.in/upsc-recruitment-2021/

ಭಾರತದಲ್ಲಿ ಆಪಲ್‌ನ ಪೂರೈಕೆದಾರರ ಸಂಖ್ಯೆಯು 2008ರಲ್ಲಿ ಆರರಷ್ಟಿತ್ತು. ಆದರೆ 2020ರಲ್ಲಿ ಈ ಸಂಖ್ಯೆ ಸುಮಾರು ಒಂಬತ್ತಕ್ಕೆ ಏರಿದೆ. ಇನ್ನಷ್ಟು ಪೂರೈಕೆದಾರರು ತಮ್ಮ ಪೂರೈಕೆ ಕೊಂಡಿಗಳನ್ನು ಭಾರತಕ್ಕೆ ಸ್ಥಳಾಂತರಗೊಳಿಸಿದ ಬಳಿಕ ಆಪಲ್‌ನಲ್ಲಿ ಕೆಲಸ ಮಾಡುವವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ.

ಇದೇ ವೇಳೆ, ಆಪಲ್ ಕಂಪೆನಿಯ ಮುಂದಿನ ಪ್ರಾಜೆಕ್ಟ್ ಆದ ಐಫೋನ್‌ 12 ಪರಿಸರ ಸ್ನೇಹಿ ಸ್ಮಾರ್ಟ್‌ಫೋನ್‌ ಅನ್ನು ಭಾರತದ ಗ್ರಾಹಕರಿಗೆಂದೇ ಬಿಡುಗಡೆ ಮಾಡಲಿದೆ. ಮತ್ತು ಈ ಒಂದು ಫೋನ್ ಅನ್ನು ಸ್ಥಳೀಯವಾಗಿ ಭಾರತದಲ್ಲೇ ಉತ್ಪಾದಿಸಲಾಗುವುದು ಎಂದು ಇದೇ ಮಾರ್ಚ್‌ನಲ್ಲಿ ಆಪಲ್ ಕಂಪೆನಿಯು ತಿಳಿಸಿತ್ತು.

ಐಫೋನ್ ಎಸ್‌ಇ ಮೂಲಕ ಆಪಲ್‌ 2017ರಿಂದ ಭಾರತದಲ್ಲಿ ತನ್ನ ಉತ್ಪಾದನಾ ಕಾರ್ಯಚರಣೆ ಆರಂಭಿಸಿತ್ತು. ಇದೀಗ ತನ್ನ ಫ್ಲಾಗ್‌ಶಿಪ್‌ನ ಅತ್ಯಂತ ಸುಧಾರಿತ ವರ್ಶನ್‌ಗಳಾದ ಎಕ್ಸ್‌ಆರ್‌, ಐಫೋನ್ 11 ಹಾಗೂ ಐಫೋನ್ 12ಗಳನ್ನು ಭಾರತದಲ್ಲೇ ಉತ್ಪಾದಿಸುತ್ತಿದೆ.

Leave a Comment