Table of Contents
Anganwadi Recruitment 2024 Karnataka ನೇಮಕಾತಿ ವಿವರ:
Anganwadi Recruitment 2024 Karnataka: ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಿರುವ ಹುದ್ದೆಗಳ ಭರ್ತಿಗೆ 2024 ರಲ್ಲಿ ಬಿಡುಗಡೆ ಮಾಡಲಾದಂತಹ ಅಧಿಸೋಚನೆಯಂತೆ ಆನ್ಲೈನ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ರೈಲ್ವೇ ನೇಮಕಾತಿ 2023:Eastern Railway Recruitment 2023
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಭಾರತೀಯ ಏರ್ ಫೋರ್ಸ್ ಅಗ್ನಿವೀರ್ ನೇಮಕಾತಿ 2024..ಅರ್ಜಿ ಸಲ್ಲಿ
ಹುದ್ದೆಗಳ ವಿವರ :
ಹುದ್ದೆ (ತುಮಕೂರು ಜಿಲ್ಲೆ) | ಸಂಖ್ಯೆ |
---|---|
ಅಂಗನವಾಡಿ ಸಹಾಯಕಿ | 278 ಹುದ್ದೆ |
ಅಂಗನವಾಡಿ ಕಾರ್ಯಕರ್ತೆಯರು | 106 ಹುದ್ದೆ |
ಹುದ್ದೆ (ಬೀದರ್ ಜಿಲ್ಲೆ) | ಸಂಖ್ಯೆ |
---|---|
ಅಂಗನವಾಡಿ ಸಹಾಯಕಿ | 65 ಹುದ್ದೆ |
ಅಂಗನವಾಡಿ ಕಾರ್ಯಕರ್ತೆಯರು | 31 ಹುದ್ದೆ |
ಅಂಗನವಾಡಿ ನೇಮಕಾತಿ 2024:Anganwadi Recruitment 2024 Karnataka
ಈ ನೇಮಕಾತಿಯು ರಾಜ್ಯದ ಮಹಿಳಾ ಅಭ್ಯರ್ಥಿಗಳಿಗೆ ಉತ್ತಮ ವೃತ್ತಿಜೀವನವನ್ನು ಒದಗಿಸುವ ಮೂಲಕ ಸುವರ್ಣಾವಕಾಶವನ್ನು ಒದಗಿಸಿದೆ. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಲು ಅರ್ಹರು? & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ನೇಮಕಾತಿ ವಿವರ:
ಇಲಾಖೆ | ಅಂಗನವಾಡಿ ಇಲಾಖೆ |
ಹುದ್ದೆಯ ಸ್ಥಳ | ಕರ್ನಾಟಕ (ತುಮಕೂರು, ಬೀದರ್) |
ಅರ್ಹತೆ:
ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯಸ್ಸಿನ ಮಿತಿಯ ಅರ್ಹತೆ:
ಕನಿಷ್ಠ 19 ವರ್ಷ & ಗರಿಷ್ಠ 35 ವರ್ಷ ವಯಸ್ಸನ್ನು ಮೀರಿರಬಾರದು. (ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುವುದು.)
ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ: Qualification
- ಅಂಗನವಾಡಿ ಸಹಾಯಕಿ – ಈ ಸಹಾಯಕಿ ಹುದ್ದೆಗೆ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಅಂಗನವಾಡಿ ಕಾರ್ಯಕರ್ತೆಯರು – ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ಅಂದರೆ 12ನೇ ತರಗತಿಯಲ್ಲಿ ಪಾಸ್ ಆಗಿರಬೇಕು. ಹಾಗೂ ತಮ್ಮ ಎಸೆಸೆಲ್ಸಿ ವಿದ್ಯಾರ್ಹತೆಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಕಲಿತಿರಬೇಕು.
ಅಂಗನವಾಡಿ ನೇಮಕಾತಿಯ ಆಯ್ಕೆ ವಿಧಾನ:
ತಮ್ಮ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು & ಬೋನಸ್ ಅಂಕಗಳನ್ನು ಒಳಗೊಂಡಂತೆ ಗಳಿಸಿದ ಒಟ್ಟು ಅಂಕಗಳಿಗನುಸಾರವಾಗಿ ಕ್ರೂಢಿಕೃತ ಪಟ್ಟಿಯನ್ನು ಸಿದ್ಧಪಡಿಸಿ ಅರ್ಹತೆ & ಮೆರಿಟ್ ಗೆ ಅನುಸಾರವಾಗಿ ಪರಿಶೀಲಿಸಿ ಹೆಚ್ಚು ಅಂಕಗಳನ್ನ ಪಡೆದಿರುವ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
IOCL -ಭಾರತೀಯ ಆಯಿಲ್ ಕಂಪನಿ ನೇಮಕಾತಿ 2024 | 1600 ಹುದ್ದೆಗಳು ಕ್ಲಿಕ್
ಅರ್ಜಿ ಶುಲ್ಕ ಪಾವತಿ ವಿಧಾನ :
ಯಾವುದೇ ಶುಲ್ಕ ಪಾವತಿ ನೀಡುವಂತಿಲ್ಲ.
ಅರ್ಜಿ ಸಲ್ಲಿಕೆ ವಿಧಾನ: Anganwadi Recruitment 2024 Karnataka
- ಈ ಅಂಗನವಾಡಿ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿವೆ, ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
- ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಓದಿದ ಬಳಿಕ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೆಳಗಡೆ “ಅರ್ಜಿ ಸಲ್ಲಿಕೆ/Online” ಲಿಂಕ್ ನೀಡಲಾಗಿದೆ, ಆ ಮೂಲಕ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಬಳಿಕ ಅಲ್ಲಿ ಸಂಬಂಧಿಸಿದ ಅಂಗನವಾಡಿ ನೇಮಕಾತಿಯ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದುಕೊಳ್ಳಿರಿ. ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿಯನ್ನು Submit ಮಾಡಿರಿ
- ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.
ಅರ್ಜಿಯೊಂದಿಗೆ ಅಪ್ಲೋಡ್ ಮಾಡಬೇಕಾದ ದಾಖಲೆಗಳು:
- ಎಸೆಸೆಲ್ಸಿ/ಜನನ ಪ್ರಮಾಣ ಪತ್ರ
- ವಿದ್ಯಾರ್ಹತೆಯ ಅಂಕಪಟ್ಟಿ
- ಜಾತಿ ಪ್ರಮಾಣ ಪತ್ರ
- ತಹಶೀಲ್ದಾರರು/ ಉಪ ತಹಶೀಲ್ದಾರರಿಂದ ಪಡೆದ 03 ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ.
- ಪತಿಯ ಮರಣ ಪ್ರಮಾಣ ಪತ್ರ & ವಿಧವಾ ಪ್ರಮಾಣ ಪತ್ರ (ವಿಧವವಾಗಿದ್ದರೆ)
- ಅಂಗವಿಕಲ ಪ್ರಮಾಣಪತ್ರ
ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Anganwadi Recruitment 2024 Karnataka)
ಅರ್ಜಿಯ ಕೊನೆಯ ದಿನಾಂಕ | 05/02/2024 |
ಅಧಿಸೂಚನೆ/Notification | ಕ್ಲಿಕ್/Click |
ಅರ್ಜಿ ಸಲ್ಲಿಕೆ/Apply | ಕ್ಲಿಕ್/Click |
ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.
Anganwadi Recruitment 2024 Karnataka
People also ask:
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter