ಬೆಂಗಳೂರು ವಿದ್ಯುತ್ ಸರಬರಾಜು (BESCOM) ಕಂಪನಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ( ಬೆಸ್ಕಾಂ Recruitment ) ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ಪೂರ್ತಿಯಾಗಿ ಓದಿ ಹಾಗೂ ಆಸಕ್ತಿ ಹೊಂದಿದವರು ಆಗಸ್ಟ್ 5/2021ರೊಳಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.
ಬೆಸ್ಕಾಂ Recruitment
ಹುದ್ದೆಯ ಹೆಸರು:
- ಟೆಕ್ನಿಷಿಯನ್ (ಡಿಪ್ಲೋಮಾ ಅಪ್ರೆಂಟಿಸ್)
- ಗ್ರಾಜುಯೇಟ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ:
- ಟೆಕ್ನಿಷಿಯನ್ ಅಪ್ರೆಂಟಿಸ್ : 75 ಹುದ್ದೆಗಳು
- ಗ್ರಾಜುಯೇಟ್ ಅಪ್ರೆಂಟಿಸ್ : 325 ಹುದ್ದೆಗಳು
- ಒಟ್ಟು 400 ಹುದ್ದೆಗಳು ಖಾಲಿ ಇವೆ.
ಆದಾಯ ತೆರಿಗೆ ಇಲಾಖೆ ನೇಮಕಾತಿ 2021 | 10th/diploma | ಒಟ್ಟು 155 ಹುದ್ದೆಗಳು, ಮುಂದೆ ಓದಿ..
ವಿದ್ಯಾರ್ಹತೆ:
- ಟೆಕ್ನಿಷಿಯನ್ ಡಿಪ್ಲೋಮಾ ಅಪ್ರೆಂಟಿಸ್ – ಈ ಹುದ್ದೆಗಳಿಗೆ ಅಂಗೀಕೃತ ಸಂಸ್ಥೆಯಿಂದ ಮೂರು ವರ್ಷ ಡಿಪ್ಲೋಮಾ ಪಾಲಿಟೆಕ್ನಿಕ್ ಕೋರ್ಸ್ ಪಾಸಾಗಿರಬೇಕು.
- ಗ್ರಾಜುಯೇಟ್ ಅಪ್ರೆಂಟಿಸ್ – ಈ ಹುದ್ದೆಗೆ ಅಭ್ಯರ್ಥಿಯು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಗರಿಷ್ಠ 40 ವರ್ಷ ವಯಸ್ಸು ನಿಗಧಿಪಡಿಸಲಾಗಿದೆ.
ವೇತನ: ಬೆಸ್ಕಾಂ Recruitment
ಗ್ರಾಜುಯೆಟ್ ಅಪ್ರೆಂಟಿಸ್ – ಈ ಹುದ್ದೆಗೆ ತಿಂಗಳಿಗೆ 7000ರೂ ವೇತನ ನೀಡಲಾಗುವುದು.
ಟೆಕ್ನಿಷಿಯನ್ ಡಿಪ್ಲೋಮಾ ಅಪ್ರೆಂಟಿಸ್ – ತಿಂಗಳಿಗೆ 5000ರೂ ವೇತನ ನೀಡಲಾಗುವುದು.
BSF- ಗಡಿ ಭದ್ರತಾ ಪಡೆ ಹಾಗೂ ಅನೇಕ ಹುದ್ದೆಗಳ ನೇಮಕಾತಿ 2021 | ವೇತನ 21,700 – 81,100
ಆಯ್ಕೆಯ ವಿಧಾನ:
ಅರ್ಜಿಸಲ್ಲಿಸಿದಂತಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ಸೂಚನೆ:
ಈ ಅಪ್ರೆಂಟಿಸ್ ತರಬೇತಿಯ ಅವಧಿಯು 1 ವರ್ಷವರೆಗೂ ಮಾತ್ರವಾಗಿದೆ.
ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05/8/2021
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ವಿವರಗಳನ್ನು ನೀಡಲಾಗಿರುವ ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿದುಕೊಳ್ಳಿ.
ಅಧಿಸೂಚನೆ ಲಿಂಕ್ : https://drive.google.com/file/d/1jfwBpDFLXpnXJY07LdYZvMzWHDb8bJHx/view
ವೆಬ್ಸೈಟ್ ಲಿಂಕ್ : https://bescom.karnataka.gov.in
ಅರ್ಜಿ ಶುಲ್ಕ:
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವು ಪಾವತಿಸಬೇಕಿಲ್ಲ.
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.