Table of Contents
KMF Recruitment 2023 Karnataka Notification in Kannada:
KMF Recruitment 2023 Karnataka: ಕರ್ನಾಟಕ ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಮಲ್ಲಸಂದ್ರ ಇದರಲ್ಲಿ ಖಾಲಿ ಇರುವ 200ಕ್ಕೂ ಹೆಚ್ಚು ವಿವಿಧ ವೃಂದಗಳ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಕೆಎಂಎಫ್ ಒಕ್ಕೂಟ ನೇಮಕಾತಿ 2023:KMF Recruitment 2023 Karnataka
ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿಗೆ ಅರ್ಹತೆಯನ್ನು ಪಡೆಯಲು ಅಭ್ಯರ್ಥಿಗಳು ಇಲಾಖೆಯು ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ & ಅನುಭವ ಅರ್ಹತೆಗಳನ್ನು ಪೂರೈಸಿರಬೇಕು. ಕರ್ನಾಟಕ ಹಾಲು ಒಕ್ಕೂಟದಲ್ಲಿ (KMF Recruitment 2023 Karnataka) ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು: KMF Recruitment 2023 Karnataka
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
---|---|
ವೈದ್ಯಾಧಿಕಾರಿ | 01 |
ಸಹಾಯಕ ವ್ಯವಸ್ಥಾಪಕರು | 28 |
ಆಡಳಿತಾಧಿಕಾರಿ | 01 |
ಖರೀದಿ/ಉಗ್ರಾಣಾಧಿಕಾರಿ | 03 |
ಎಂ.ಐ.ಎಸ್/ಸಿಸ್ಟಮ್ ಅಧಿಕಾರಿ | 01 |
ಲೆಕ್ಕಾಧಿಕಾರಿ | 02 |
ಮಾರುಕಟ್ಟೆ ಅಧಿಕಾರಿ | 03 |
ತಾಂತ್ರಿಕ ಅಧಿಕಾರಿ (ಡಿ. ಟಿ) | 11 |
ತಾಂತ್ರಿಕಾಧಿಕಾರಿ (ಇಂಜಿನಿಯರಿಂಗ್-ಮೆಕ್ಯಾನಿಕಲ್, ಸಿವಿಲ್ & ಗು.ನಿ) | 04 |
ವಿಸ್ತರಣಾಧಿಕಾರಿ (ದರ್ಜೆ-03) | 22 |
ಎಮ್.ಐ.ಎಸ್ ಸಹಾಯಕ ದರ್ಜೆ1 | 02 |
ಆಡಳಿತ ಸಹಾಯಕ (ದರ್ಜೆ-2) | 13 |
ಲೆಕ್ಕ ಸಹಾಯಕ (ದರ್ಜೆ-2) | 12 |
ಮಾರುಕಟ್ಟೆ ಸಹಾಯಕ (ದರ್ಜೆ-2) | 18 |
ಖರೀದಿ ಸಹಾಯಕ (ದರ್ಜೆ-2) | 06 |
ಕೆಮಿಸ್ಟ್ ದರ್ಜೆ-2 | 04 |
ಕಿರಿಯ ಸಿಸ್ಟಮ್ ಆಪರೇಟರ್ | 10 |
ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) | 02 |
ಟೆಲಿಫೋ ಆಪರೇಟರ್ | 02 |
ಕಿರಿಯ ತಾಂತ್ರಿಕ | 64 |
ಚಾಲಕರು | 08 |
ಲ್ಯಾಬ್ ಸಹಾಯಕರು | 02 |
ಹುದ್ದೆಯ ಒಟ್ಟು ಸಂಖ್ಯೆ:
ಕರ್ನಾಟಕ ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಒಟ್ಟು 219 ಹುದ್ದೆಗಳು ಖಾಲಿ ಇವೆ.
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | Apply Here ಕ್ಲಿಕ್ |
12th jobs/ PUC jobs. > | Apply Here ಕ್ಲಿಕ್ |
ವೇತನ: (KMF Recruitment 2023 Karnataka)
ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳು ಒಕ್ಕೂಟ ನೇಮಕಾತಿಯ ಪ್ರಕಟಣೆಯಂತೆ ಆಯಾ ಹುದ್ದೆಗಳ ವೆತನದ ವಿವರಗಳು ಈ ಕೆಳಗಿನಂತಿವೆ:
ಹುದ್ದೆಯ ಹೆಸರು | ವೇತನ |
---|---|
ವೈದ್ಯಾಧಿಕಾರಿ | ಮಾಸಿಕ ರೂ. 52,650 – 97,100/- |
ಸಹಾಯಕ ವ್ಯವಸ್ಥಾಪಕರು | ಮಾಸಿಕ ರೂ. 52,650 – 97,100/- |
ಆಡಳಿತಾಧಿಕಾರಿ | ಮಾಸಿಕ ರೂ. 43,100 – 83,900/- |
ಖರೀದಿ/ಉಗ್ರಾಣಾಧಿಕಾರಿ | ಮಾಸಿಕ ರೂ. 43,100 – 83,900/- |
ಎಂ.ಐ.ಎಸ್/ಸಿಸ್ಟಮ್ ಅಧಿಕಾರಿ | ಮಾಸಿಕ ರೂ. 43,100 – 83,900/- |
ಲೆಕ್ಕಾಧಿಕಾರಿ | ಮಾಸಿಕ ರೂ. 43,100 – 83,900/- |
ಮಾರುಕಟ್ಟೆ ಅಧಿಕಾರಿ | ಮಾಸಿಕ ರೂ. 43,100 – 83,900/- |
ತಾಂತ್ರಿಕ ಅಧಿಕಾರಿ (ಡಿ. ಟಿ) | ಮಾಸಿಕ ರೂ. 43,100 – 83,900/- |
ತಾಂತ್ರಿಕಾಧಿಕಾರಿ (ಇಂಜಿನಿಯರಿಂಗ್-ಮೆಕ್ಯಾನಿಕಲ್, ಸಿವಿಲ್ & ಗು.ನಿ) | ಮಾಸಿಕ ರೂ. 43,100 – 83,900/- |
ವಿಸ್ತರಣಾಧಿಕಾರಿ (ದರ್ಜೆ-03) | ಮಾಸಿಕ ರೂ. 33,450 – 62,600/- |
ಎಮ್.ಐ.ಎಸ್ ಸಹಾಯಕ ದರ್ಜೆ1 | ಮಾಸಿಕ ರೂ. 33,450 – 62,600/- |
ಆಡಳಿತ ಸಹಾಯಕ (ದರ್ಜೆ-2) | ಮಾಸಿಕ ರೂ. 27,650 – 52,650/- |
ಲೆಕ್ಕ ಸಹಾಯಕ (ದರ್ಜೆ-2) | ಮಾಸಿಕ ರೂ. 27,650 – 52,650/- |
ಮಾರುಕಟ್ಟೆ ಸಹಾಯಕ (ದರ್ಜೆ-2) | ಮಾಸಿಕ ರೂ. 27,650 – 52,650/- |
ಖರೀದಿ ಸಹಾಯಕ (ದರ್ಜೆ-2) | ಮಾಸಿಕ ರೂ. 27,650 – 52,650/- |
ಕೆಮಿಸ್ಟ್ ದರ್ಜೆ-2 | ಮಾಸಿಕ ರೂ. 27,650 – 52,650/- |
ಕಿರಿಯ ಸಿಸ್ಟಮ್ ಆಪರೇಟರ್ | ಮಾಸಿಕ ರೂ. 27,650 – 52,650/- |
ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) | ಮಾಸಿಕ ರೂ. 27,650 – 52,650/- |
ಟೆಲಿಫೋ ಆಪರೇಟರ್ | ಮಾಸಿಕ ರೂ. 27,650 – 52,650/- |
ಕಿರಿಯ ತಾಂತ್ರಿಕ | ಮಾಸಿಕ ರೂ. 21,400 – 42,000/- |
ಚಾಲಕರು | ಮಾಸಿಕ ರೂ. 21,400 – 42,000/- |
ಲ್ಯಾಬ್ ಸಹಾಯಕರು | ಮಾಸಿಕ ರೂ. 21,400 – 42,000/- |
ವಯೋಮಿತಿ:(KMF Recruitment 2023 Karnataka)
ವರ್ಗ | ವಯೋಮಿತಿ |
---|---|
ಸಾಮಾನ್ಯ ವರ್ಗ | 18 – 35 ವರ್ಷ |
ಒಬಿಸಿ ವರ್ಗ | 18 – 38 ವರ್ಷ |
SC/ST, ಪ್ರವರ್ಗ1 | 18 – 40 ವರ್ಷ |
10th ಪಾಸ್ ಸರ್ಕಾರಿ ನೇಮಕಾತಿ 2023| ಭಾತದಲ್ಲೆಡೆ ಒಟ್ಟು 9212 ಹುದ್ದೆಗಳು..ಕ್ಲಿಕ್ ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ: KMF Recruitment 2023 Karnataka
- ವೈದ್ಯಾಧಿಕಾರಿ – ಎಂ.ಬಿ.ಬಿ.ಎಸ್(MBBS) ವಿದ್ಯಾರ್ಹತೆ ಜೊತೆಗೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ (KMC) ಪ್ರಮಾಣ ಪತ್ರ ಪಡೆದಿರಬೇಕು. ಮತ್ತು ಯಾವುದೇ ಆಸ್ಪತ್ರೆಯಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು.
- ಸಹಾಯಕ ವ್ಯವಸ್ಥಾಪಕರು(ಪ.ವೈ& ಕೃ.ಗ/ಮೆಕ್ಯಾನಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ಎಂ&ಎಫ್) –
- ಬಿ.ಬಿ.ಎಸ್ಸಿ & ಎ.ಎಚ್ ಪದವಿ ಮತ್ತು ಕರ್ನಾಟಕ ವೆಟರ್ನರಿ ಕೌನ್ಸಿಲ್ (KVC) ಪ್ರಮಾಣ ಪತ್ರವನ್ನು ಹೊಂದಿರಬೇಕು. ಅಥವಾ
- ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ & ಕಂಪ್ಯೂಟರ ಜ್ಞಾನ ಅಥವಾ
- ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರಿಂಗ್ ಪದವಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಅಥವಾ,
- ಕೃಷಿ ವಿಜ್ಞಾನ ವಿಷಯದಲ್ಲಿ ಎಂಎಸ್ಸಿ (M.SC agriculture) ಸ್ನಾತಕೋತ್ತರ ಪದವಿ ಇನ್ ಅಗ್ರೋನಮಿ/ಸೀಡ್ ಟೆಕ್ನೋಲಜಿಯಲ್ಲಿ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಸಂಬಂಧಪಟ್ಟ ಕ್ಷೇತ್ರದಲ್ಲಿ ಯಾವುದೇ ಕೈಗಾರಿಕೋದ್ಯಮ/ ಸಂಸ್ಥೆಯಲ್ಲಿ 02 ವರ್ಷದ ಅನುಭವ.
- ಆಡಳಿತಾಧಿಕಾರಿ – ಎಲ್.ಎಲ್.ಬಿ / ಬಿ.ಎ.ಎಲ್. ಎಲ್.ಎಲ್.ಬಿ (05 ವರ್ಷ) /ಎಂ.ಬಿ.ಎ (HR)/ ಎಂ.ಎಸ್.ಡಬ್ಲ್ಯೂ ವಿದ್ಯಾರ್ಹತೆ ಮತ್ತು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಸಂಬಂಧಪಟ್ಟ ಕ್ಷೇತ್ರದ ಯಾವುದೇ ಕೈಗಾರಿಕೋದ್ಯಮದಲ್ಲಿ/ಸಂಸ್ಥೆಯಲ್ಲಿ ಎರಡು ವರ್ಷದ ಅನುಭವ ಹೊಂದಿರಬೇಕು.
- ಖರೀದಿ/ಉಗ್ರಾಣಾಧಿಕಾರಿ – ಬಿಕಾಂ/ ಬಿಬಿಎಂ/ ಬಿಬಿಎ ಪದವಿ ವಿದ್ಯಾರ್ಹತೆ ಜೊತೆಗೆ ಎಂ.ಕಾಂ /ಎಂ ಬಿ.ಎ ಇನ್ ಮೆಟೀರಿಯಲ್ ಮ್ಯಾನೇಜ್ಮೆಂಟ್/ ಪಿಜಿ ಡಿಪ್ಲೋಮಾ ಇನ್ ಮೆಟೀರಿಯಲ್ ಮ್ಯಾನೇಜ್ಮೆಂಟ್ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಜೊತೆಗೆ ಸಂಬಂಧಪಟ್ಟ ಕ್ಷೇತ್ರದ ಯಾವುದೇ ಕೈಗಾರಿಕೋದ್ಯಮದಲ್ಲಿ/ಸಂಸ್ಥೆಯಲ್ಲಿ ಎರಡು ವರ್ಷದ ಅನುಭವ
- ಎಂ.ಐ.ಎಸ್/ಸಿಸ್ಟಮ್ ಅಧಿಕಾರಿ – ಎಂಸಿಎ/ ಬಿಇ (ಕಂಪ್ಯೂಟರ್ ಸೈನ್ಸ್ /ಇನ್ಫಾರ್ಮಶನ್ ಸೈನ್ಸ್/ ಇ & ಸಿ) ವಿದ್ಯಾರ್ಹತೆ ಹೊಂದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಜೊತೆಗೆ ಸಂಬಂಧಪಟ್ಟ ಕ್ಷೇತ್ರದ ಯಾವುದೇ ಕೈಗಾರಿಕೋದ್ಯಮದಲ್ಲಿ/ಸಾಫ್ಟ್ ವೇರ್ ಕ್ಷೇತ್ರದಲ್ಲಿ 02 ವರ್ಷದ ಅನುಭವ ಹೊಂದಿರಬೇಕು.
- ಲೆಕ್ಕಾಧಿಕಾರಿ – ಎಂಕಾಂ/ ಎಂಬಿಎ (ಫೈನಾನ್ಸ್) ವಿದ್ಯಾರ್ಹತೆ ಹೊಂದಿರಬೇಕು ಮತ್ತು ಸಂಬಂಧ ಪಟ್ಟ ಕ್ಷೇತ್ರದ ಯಾವುದೇ ಬೃಹತ್ ಕೈಗಾರಿಕೋದ್ಯಮದಲ್ಲಿ 02 ವರ್ಷದ ಅನುಭವ ಹೊಂದಿರಬೇಕು.
- ಮಾರುಕಟ್ಟೆ ಅಧಿಕಾರಿ – ಕಾನೂನು ರೀತ್ಯ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಎಂಬಿಎ (ಮಾರುಕಟ್ಟೆ) / ಬಿಎಸ್ಸಿ (ಅಗ್ರಿಕಲ್ಚರಲ್ ಮಾರ್ಕೆಟಿಂಗ್ & ಕಾರ್ಪೊರೇಷನ್) ವಿದ್ಯಾರ್ಹತೆ ಹೊಂದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಜೊತೆಗೆ ಡೇರಿ ಉದ್ದಿಮೆಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕನಿಷ್ಠ 04 ವರ್ಷಗಳ ಅನುಭವವನ್ನು ಹೊಂದಿರಬೇಕು.
- ತಾಂತ್ರಿಕ ಅಧಿಕಾರಿ (ಡಿ. ಟಿ) – ಬಿ.ಟೆಕ್ (ಡಿ.ಟಿ) ಪದವಿ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ತಾಂತ್ರಿಕಾಧಿಕಾರಿ (ಇಂಜಿನಿಯರಿಂಗ್-ಮೆಕ್ಯಾನಿಕಲ್, ಸಿವಿಲ್ & ಗು.ನಿ) – ಬಿ.ಇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ / ಬಿ.ಇ ಸಿವಿಲ್ ಇಂಜಿನಿಯರಿಂಗ್ ಪದವಿ /ಯಾವುದೇ ಪದವಿಯೊಂದಿಗೆ ಎಂ.ಎಸ್ಸಿ (ಮೈಕ್ರೋ ಬಯೋಲಜಿ / ಕೆಮಿಸ್ಟ್ರಿ) ವಿದ್ಯಾರ್ಹತೆ ಹೊಂದಿರಬೇಕು)
- ವಿಸ್ತರಣಾಧಿಕಾರಿ (ದರ್ಜೆ-03) – ಕಾನೂನು ರಿತ್ಯ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
- ಎಮ್.ಐ.ಎಸ್ ಸಹಾಯಕ ದರ್ಜೆ1 – ಬಿಸಿಎ/ ಬಿಎಸ್ಸಿ (ಕಂಪ್ಯೂಟರ್ ಸೈನ್ಸ್) ಅಥವಾ ಬಿಇ (ಸಿಎಸ್) ವಿದ್ಯಾರ್ಹತೆ ಹೊಂದಿರಬೇಕು ಜೊತೆಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ 02 ವರ್ಷದ ಅನುಭವವನ್ನು ಹೊಂದಿರಬೇಕು.
- ಆಡಳಿತ ಸಹಾಯಕ (ದರ್ಜೆ-2) – ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಜ್ಞಾನ ತಿಳಿದಿರಬೇಕು.
- ಲೆಕ್ಕ ಸಹಾಯಕ (ದರ್ಜೆ-2) – ಬಿಕಾಂ ಪದವಿ ವಿದ್ಯಾರ್ಹತೆ ಜೊತೆಗೆ ಕಡ್ಡಾಯವಾಗಿ ಕ್ಯಾಲಿ ಪ್ಯಾಕೇಜ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು
- ಮಾರುಕಟ್ಟೆ ಸಹಾಯಕ (ದರ್ಜೆ-2) – ಮಾರುಕಟ್ಟೆಯನ್ನು ಒಂದು ಮುಖ್ಯ ವಿಷಯವಾಗಿ ಬಿಬಿಎ/ ಬಿಬಿಎಂ ಪದವಿ ಜೊತೆಗೆ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
- ಖರೀದಿ ಸಹಾಯಕ (ದರ್ಜೆ-2) – ಕಾನೂನು ರೀತ್ಯ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ವಿದ್ಯಾರ್ಹತೆ ಜೊತೆಗೆ MS Word/ MS Excel ನಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಕೆಮಿಸ್ಟ್ ದರ್ಜೆ-2 – ಕೆಮಿಸ್ಟ್ರಿ/ ಮೈಕ್ರೋ ಬಯಾಲಜಿಯಲ್ಲಿ ಒಂದು ಮುಖ್ಯ ವಿಷಯವಾಗಿ ವಿಜ್ಞಾನ(ಸೈನ್ಸ್) ಪದವಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ MS Word/ MS Excel ನಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಕಿರಿಯ ಸಿಸ್ಟಮ್ ಆಪರೇಟರ್ – ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್)/ ಬಿಸಿಎ/ ಬಿಇ (ಸಿ.ಎಸ್/ ಐ.ಎಸ್) ವಿದ್ಯಾರ್ಹತೆ ಹೊಂದಿರಬೇಕು.
- ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯೊಂದಿಗೆ ಮಾಜಿ ಸೈನಿಕರಾಗಿರಬೇಕು. ಗನ್ ಲೈಸೆನ್ಸ್ ಹೊಂದಿರುವ ಮಾಜಿ ಸೈನಿಕರಿಗೆ ಆದ್ಯತೆ ನೀಡಲಾಗುವುದು.
- ಟೆಲಿಫೋನ್ ಆಪರೇಟರ್ – ಯಾವುದೇ ಪದವಿ ವಿದ್ಯಾರ್ಹತೆ ಜೊತೆಗೆ ಟೆಲಿಫೋನ್ ನಿರ್ವಹಣೆಯಲ್ಲಿ ಪ್ರಮಾಣ ಪತ್ರ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಕಿರಿಯ ತಾಂತ್ರಿಕ (ಮೆಕ್ಯಾನಿಕಲ್) – ರಾಜ್ಯ/ ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಮೆಕ್ಯಾನಿಕಲ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಜೊತೆಗೆ ಯಾವುದೇ ಕೈಗಾರಿಕೋದ್ಯಮದಲ್ಲಿ 03 ವರ್ಷ ಅನುಭವ ಹೊಂದಿರಬೇಕು.
- ಕಿರಿಯ ತಾಂತ್ರಿಕ (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್) – ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಜೊತೆಗೆ 03 ವರ್ಷದ ಅನುಭವ.
- ಕಿರಿಯ ತಾಂತ್ರಿಕ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್) – ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಜೊತೆಗೆ 03 ವರ್ಷದ ಅನುಭವ.
- ಕಿರಿಯ ತಾಂತ್ರಿಕ (ರೆಫ್ರಿಜರೇಟರ್ &ಏರ್ ಕಂಡೀಷನಿಂಗ್) – ರೆಫ್ರಿಜರೇಟರ್ &ಏರ್ ಕಂಡೀಷನಿಂಗ್ ನಲ್ಲಿ ಐಟಿಐ ವಿದ್ಯಾರ್ಹತೆ & ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು. 03 ವರ್ಷದ ಅನುಭವ ಹೊಂದಿರಬೇಕು.
- ಕಿರಿಯ ತಾಂತ್ರಿಕ (ಫಿಟ್ಟರ್) – ಫಿಟ್ಟರ್ ನಲ್ಲಿ ಐಟಿಐ ವಿದ್ಯಾರ್ಹತೆ ಜೊತೆಗೆ 03 ವರ್ಷದ ಅನುಭವ.
- ಕಿರಿಯ ತಾಂತ್ರಿಕ (ವೆಲ್ಡರ್) – ವೆಲ್ಡರ್ ನಲ್ಲಿ ಐಟಿಐ ವಿದ್ಯಾರ್ಹತೆ ಜೊತೆಗೆ 03 ವರ್ಷದ ಅನುಭವ.
- ಕಿರಿಯ ತಾಂತ್ರಿಕ (ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್) – ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್ ನಲ್ಲಿ ಐಟಿಐ ವಿದ್ಯಾರ್ಹತೆ ಜೊತೆಗೆ 03 ವರ್ಷದ ಅನುಭವ.
- ಕಿರಿಯ ತಾಂತ್ರಿಕ (ಎಲೆಕ್ಟ್ರಾನಿಕ್ ಮೆಕ್ಯಾನಿಕ್) – ಎಲೆಕ್ಟ್ರಾನಿಕ್ ಮೆಕ್ಯಾನಿಕ್ ನಲ್ಲಿ ಐಟಿಐ ವಿದ್ಯಾರ್ಹತೆ ಜೊತೆಗೆ 03 ವರ್ಷದ ಅನುಭವ.
- ಕಿರಿಯ ತಾಂತ್ರಿಕ (ಬಾಯ್ಲರ್) – ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಮತ್ತು ಡೈರೆಕ್ಟರ್ ಆಫ್ ಫ್ಯಾಕ್ಟರಿ & ಬಾಯ್ಲರ್ ರೊಂದಿಗೆ 2ನೇ ದರ್ಜೆ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್ ಹೊಂದಿರಬೇಕು.
- ಚಾಲಕರು – ಕನ್ನಡವನ್ನು ಒಂದು ವಿಷಯವಾಗಿ ಎಸ್.ಎಸ್.ಎಲ್.ಸಿ ಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಲಘು/ಭಾರಿ (Light/Heavy) ವಾಹನ ಚಾಲನ ಪರವಾನಗಿ ಹೊಂದಿರಬೇಕು.
- ಲ್ಯಾಬ್ ಸಹಾಯಕರು – ಕೆಮಿಸ್ಟ್ರಿ/ ಮೈಕ್ರೋ ಬಯಾಲಜಿ ಒಂದು ವಿಷಯವಾಗಿ ಪಿಯುಸಿ(PUC) ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು, ಸಂದರ್ಶನವು ಗರಿಷ್ಠ 15 ಅಂಕಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು 85% ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ, ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.
12th ಪಾಸ್ ಸರ್ಕಾರಿ ನೇಮಕಾತಿ ಕರ್ನಾಟಕ |ಉತ್ತಮ ವೇತನ..ಹುದ್ದೆಯ ವಿವರ
ಅರ್ಜಿ ಸಲ್ಲಿಸುವ ವಿಧಾನ: KMF Recruitment 2023 Karnataka
- ಅರ್ಜಿ ಸಲ್ಲಿಸುವ ಮುನ್ನ, ಅಧಿಸೂಚನೆ ಪ್ರಕಟಣೆಯನ್ನು ಎಚ್ಚರಿಕೆಯಿಂದ ಓದಬೇಕು.
- ಬಳಿಕ, ಈ ಲೇಖನದ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, ವೆಬ್ಸೈಟ್ ಅನ್ನು ತೆರೆದ ಬಳಿಕ, “TUMUL Recruitment 2023” ಮೂಡುತ್ತದೆ, ಅಲ್ಲಿ ಸಂಬಂಧಪಟ್ಟ ಹುದ್ದೆಯನ್ನು ಆಯ್ಕೆ ಮಾಡಿ, “APPLY” ಗುಂಡಿಯನ್ನು ಒತ್ತಿರಿ ಮತ್ತು ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಿ.
- ಆನ್ಲೈನ್ ಅರ್ಜಿಯಲ್ಲಿ ಭಾವಚಿತ್ರ/ಸಹಿ/ವಯೋಮಿ”ತಿ/ವಿದ್ಯಾರ್ಹತೆ/ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
- ಬಳಿಕ, ಕೆಳಗೆ ನೀಡಲಾಗಿರುವ ಆಯಾ ವರ್ಗಗಳ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ, ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವ ಹಂತ ಹಂತವಾದ ವಿವರಗಳು ಕೆಳಗೆ ಅಧಿಸೂಚನೆ/Notification ಯಲ್ಲಿ ಅಥವಾ ಅಧಿಕೃತ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ನೀಡಲಾಗಿದೆ.
ಅರ್ಜಿ ಶುಲ್ಕ & ಪಾವತಿ ವಿಧಾನ:
- SC/ST, ಪ್ರವರ್ಗ1 – 500/-
- ಉಳಿದ ವರ್ಗದ ಅಭ್ಯರ್ಥಿಗಳಿಗೆ – 1000/-
- ಅಭ್ಯರ್ಥಿಗಳು ಆಯಾ ವರ್ಗಗಳಿಗೆ ಸಂಬಂಧಿಸಿದ ಶುಲ್ಕವನ್ನು ಆನ್ಲೈನ್ ನೆಟ್ ಬ್ಯಾಂಕಿಂಗ್/ ಡೆಬಿಟ್/ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕು.
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 18/03/2023
ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 17/04/2023
ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು:
ಅಧಿಸೂಚನೆ/Notification | ಕ್ಲಿಕ್/Click |
ಅರ್ಜಿ ಸಲ್ಲಿಸಿ/Apply | ಕ್ಲಿಕ್/Click |
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
KMF Recruitment 2023 Karnataka|Tumkur KMF Recruitment 2023 notification
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.
People Also Ask:
- What is the salary of KMF of in Karnataka?
- Is KMF Govt or Private?
- What are the age limit of KMF?
- What are Qualifications for KMF?
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment