ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ 2023:KMF Recruitment 2023 Belagavy

KMF Recruitment 2023 Belagavy in Karnataka Notification:

KMF Recruitment 2023 Belagavy: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಬೆಳಗಾವಿ ಇಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹಲವು ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿ ಮುಖಾಂತರ ಅರ್ಜಿಯನ್ನು ಆಹ್ವಾನಿಸಿದೆ. ಈ KMF ನೇಮಕಾತಿಯ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ 2023:KMF Recruitment 2023 Belagavy

ಕರ್ನಾಟಕ KMF ಅರ್ಜಿ ಸಲ್ಲಿಸಲು ಮೊದಲು ಹುದ್ದೆಯ ಬಗೆಗಿನ ಪೂರ್ತಿ ಮಾಹಿತಿಯನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು: KMF Recruitment 2023 Belagavy

ನೇಮಕಾತಿ ಇಲಾಖೆ ಹೆಸರುKMF- ಕೆಎಮ್ಎಫ್
ಒಟ್ಟು ಹುದ್ದೆ46 ಹುದ್ದೆಗಳು
ವಯೋಮಿತಿಕನಿಷ್ಠ 18 & ಗರಿಷ್ಠ 35 ವರ್ಷ
ಹುದ್ದೆಯ ಸ್ಥಳಬೆಳಗಾವಿ (ಕರ್ನಾಟಕ)
ಅರ್ಜಿ ಶುಲ್ಕSC/ST ಅಭ್ಯರ್ಥಿಗಳಿಗೆ ರೂ.500/- & ಇತರೆ ವರ್ಗಕ್ಕೆ ರೂ.1000/-

ಮೆಸ್ಕಾಂ ಇಲಾಖೆ ನೇಮಕಾತಿ ಕರ್ನಾಟಕ 2023 ಅರ್ಜಿ ಸಲ್ಲಿಸಲು ಕ್ಲಿಕ

ಹುದ್ದೆಯ ಹೆಸರುಹುದ್ದೆ ಸಂಖ್ಯೆ
ಕಿರಿಯ ತಾಂತ್ರಿಕರು09
ಕಿರಿಯ ಸಿಸ್ಟಂ ಆಪರೇಟರ್01
ಕೆಮಿಸ್ಟ್ ದರ್ಜೆ – 204
ಮಾರುಕಟ್ಟೆ ಸಹಾಯಕ ದರ್ಜೆ – 202
ಲೆಕ್ಕ ಸಹಾಯಕ ದರ್ಜೆ – 205
ಆಡಳಿತ ಸಹಾಯಕ ದರ್ಜೆ – 205
ವಿಸ್ತರಣಾಧಿಕಾರಿ ದರ್ಜೆ – 310
ತಾಂತ್ರಿಕ ಅಧಿಕಾರಿ (ಕ್ಯೂಸಿ/ಎಂ.ಬಿ)01
ತಾಂತ್ರಿಕ ಅಧಿಕಾರಿ (ಇಂಜಿನಿಯರಿಂಗ್)03
ತಾಂತ್ರಿಕ ಅಧಿಕಾರ (ಡಿಟಿ)03
ಸಹಾಯಕ ವ್ಯವಸ್ಥಾಪಕರು (ವಿತ್ತ)01
ಸಹಾಯಕ ವ್ಯವಸ್ಥಾಪಕರು (ಎ.ಹೆಚ್ & ಎ. ಐ)02

ವೇತನದ ವಿವರ:

ಹುದ್ದೆಯ ಹೆಸರುವೇತನ
ಕಿರಿಯ ತಾಂತ್ರಿಕರುರೂ. 21,400-42,000/-
ಕಿರಿಯ ಸಿಸ್ಟಂ ಆಪರೇಟರ್ರೂ. 27,650-52,650/-
ಕೆಮಿಸ್ಟ್ ದರ್ಜೆ – 2ರೂ. 27,650-52,650/-
ಮಾರುಕಟ್ಟೆ ಸಹಾಯಕ ದರ್ಜೆ – 2ರೂ. 27,650-52,650/-
ಲೆಕ್ಕ ಸಹಾಯಕ ದರ್ಜೆ – 2ರೂ. 27,650-52,650/-
ಆಡಳಿತ ಸಹಾಯಕ ದರ್ಜೆ – 2ರೂ. 27,650-52,650/-
ವಿಸ್ತರಣಾಧಿಕಾರಿ ದರ್ಜೆ – 3ರೂ. 33,450-62,600/-
ತಾಂತ್ರಿಕ ಅಧಿಕಾರಿ (ಕ್ಯೂಸಿ/ಎಂ.ಬಿ)ರೂ. 43,100-83,900/-
ತಾಂತ್ರಿಕ ಅಧಿಕಾರಿ (ಇಂಜಿನಿಯರಿಂಗ್)ರೂ. 43,100-83,900/-
ತಾಂತ್ರಿಕ ಅಧಿಕಾರಿ (ಡಿಟಿ)ರೂ. 43,100-83,900/-
ಸಹಾಯಕ ವ್ಯವಸ್ಥಾಪಕರು (ವಿತ್ತ)ರೂ. 52,650-97,100/-
ಸಹಾಯಕ ವ್ಯವಸ್ಥಾಪಕರು (ಎ.ಹೆಚ್ & ಎ. ಐ)ರೂ. 52,650-97,100/-

ಆಯ್ಕೆ ವಿಧಾನ:
ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1: 5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆದು ಆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

10ನೇ ತರಗತಿ ಪಾಸ್ ಸಹಾಯಕ, ಸೇವಕ ಹುದ್ದೆಗಳು 2023 ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ/ಅರ್ಹತೆ:

  • ಕಿರಿಯ ತಾಂತ್ರಿಕರು (ಬಾಯ್ಲರ್/ಎಲೆಕ್ಟ್ರಿಕಲ್/ರೆಫ್ರಿಜರೇಶನ್&ಏರ್ ಕಂಡೀಷನ್/ಮೆಕ್ಯಾನಿಕಲ್) – ಈ ಹುದ್ದೆಗಳಿಗೆ 10th(SSLC) ವಿದ್ಯಾರ್ಹತೆಯನ್ನು ಪೂರ್ತಿಗೊಳಿಸಿರಬೇಕು. ಮತ್ತು ಆಯಾ ಕಿರಿಯ ತಾಂತ್ರಿಕ (ಎಲೆಕ್ಟ್ರಿಕಲ್/ರೆಫ್ರಿಜರೇಶನ್&ಏರ್ ಕಂಡೀಷನ್/ಮೆಕ್ಯಾನಿಕಲ್) ಹುದ್ದೆಗಳಲ್ಲಿ ಐಟಿಐ/ಡಿಪ್ಲೋಮಾ ವಿದ್ಯಾರ್ಹತೆ ಮಾಡಿರಬೇಕು. ಬಾಯ್ಲರ್ ಹುದ್ದೆಗೆ ಮಾತ್ರ ಬಾಯ್ಲರ್ ದರ್ಜೆ -2 ಪ್ರಮಾಣ ಪತ್ರ ಹೊಂದಿರಬೇಕು.
  • ಕಿರಿಯ ಸಿಸ್ಟಂ ಆಪರೇಟರ್ – ಕಾನೂನು ರೀತ್ಯಾ ಸ್ಥಾಪಿಸಲಾದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಸಿಎ/ಬಿಎಸ್ಸಿ (ಕಂಪ್ಯೂಟರ್ ಸೈನ್ಸ್) ಪದವಿ ವಿದ್ಯಾರ್ಹತೆ ಹೊಂದಿರಬೇಕು.
  • ಕೆಮಿಸ್ಟ್ ದರ್ಜೆ 2 – ಅಭ್ಯರ್ಥಿಯು ಬಿ.ಎಸ್ಸಿ(ಕೆಮಿಸ್ಟ್/ಮೈಕ್ರೋಬಯಾಲಜಿ) ವಿದ್ಯಾರ್ಹತೆ ಹೊಂದಿರಬೇಕು.
  • ಮಾರುಕಟ್ಟೆ ಸಹಾಯಕ ದರ್ಜೆ 2 – ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತ ಪಡೆದ ವಿಶ್ವವಿದ್ಯಾಲಯದಿಂದ ಬಿಬಿಎಂ/ಬಿಕಾಂ/ಬಿಬಿಎ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಲೆಕ್ಕ ಸಹಾಯಕ ದರ್ಜೆ 2 – ಮಾನ್ಯತ ಪಡೆದ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ ವಿದ್ಯಾರ್ಹತೆ ಹೊಂದಿರಬೇಕು.
  • ಆಡಳಿತ ಸಹಾಯಕ ದರ್ಜೆ 2 – ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬಹುದು.
  • ವಿಸ್ತರಣಾಧಿಕಾರಿ ದರ್ಜೆ 3 – ಬಿಎ/ಬಿಎಸ್ಸಿ/ಬಿಕಾಂ/ಬಿಬಿಎಂ/ಬಿಬಿಎ ಪದವಿ ವಿದ್ಯಾರ್ಹತೆ ಹೊಂದಿರಬೇಕು.
  • ತಾಂತ್ರಿಕ ಅಧಿಕಾರಿ (ಡಿಟಿ/ಕ್ಯೂಸಿ&ಎಂ.ಬಿ/ಇಂಜಿನಿಯರಿಂಗ್) – ಈ ತಾಂತ್ರಿಕ ಅಧಿಕಾರಿ ಹುದ್ದೆಗಳ ಆಯಾ ಸಂಬಂಧಿತ ಟ್ರೇಡ್ ಗಳಲ್ಲಿ ಬಿಇ/ಬಿಟೆಕ್ (BE/B.Tech) ಪದವಿ ವಿದ್ಯಾರ್ಹತೆ ಹೊಂದಿರಬೇಕು.
  • ಸಹಾಯಕ ವ್ಯವಸ್ಥಾಪಕರು (ವಿತ್ತ) – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ ಜೊತೆಗೆ ಎಂಬಿಎ(MBA) ಅಥವಾ ಎಂ.ಕಾಂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ & ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಅಥವಾ ರಾಜ್ಯದ ಯಾವುದೇ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವಿತ್ತ ವಿಭಾಗದಲ್ಲಿ ಕನಿಷ್ಠ 03 ವರ್ಷಗಳ ಅನುಭವ ಹೊಂದಿರಬೇಕು.
  • ಸಹಾಯಕ ವ್ಯವಸ್ಥಾಪಕರು (ಎ.ಹೆಚ್ & ಎ.ಐ) – ಮಾನ್ಯತ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್.ಸಿ & ಎ.ಹೆಚ್ ಪದವಿ ವಿದ್ಯಾರ್ಹತೆ ಹೊಂದಿರಬೇಕು & ಕರ್ನಾಟಕ ಪಶು ವೈದ್ಯಕೀಯ ಕೌನ್ಸಿಲ್ನಿಂದ ನೋಂದಣಿ ಪ್ರಮಾಣ ಪತ್ರ ಹೊಂದಿರತಕ್ಕದ್ದು.

ಅರ್ಜಿ ಸಲ್ಲಿಕೆ ವಿಧಾನ: KMF Recruitment 2023 Belagavy

  • ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಸಿ.
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಕೆಯ ಲಿಂಕ್ ಕೆಳಗೆ ನೀಡಲಾಗಿದೆ “ಅರ್ಜಿ ಸಲ್ಲಿಸಿ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದುಕೊಳ್ಳಿರಿ.
  • ಬಳಿಕ ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸಿರಿ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (KMF Recruitment 2023 Belagavy)

ಅರ್ಜಿ ಕೊನೆಯ ದಿನಾಂಕ 26/09/2023
ಅಧಿಸೂಚನೆ/Notificationಕ್ಲಿಕ್/Click
ಕಿರು ಪ್ರಕಟಣೆ/Short Noticeಕ್ಲಿಕ್/Click
ಅರ್ಜಿ ಫಾರಂ (Application)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

KMF Recruitment 2023 Belagavy

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment