KEB Recruitment 2021,HESCOM Recruitment 2021:ಹೆಸ್ಕಾಂ ನೇರ ನೇಮಕಾತಿ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿಯಲ್ಲಿ (HESCOM Recruitment 2021) ಖಾಲಿ ಇರುವ ಮೈಕ್ರೋ ಫೀಡರ್ ಫ್ರಾಂಚೈಸಿ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ಪೂರ್ತಿ ವಿವರ ಈ ಕೆಳಗಿನಂತೆ ಓದಿ, ಆಸಕ್ತಿ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೆಸರು:
ಮೈಕ್ರೋ ಫೀಡರ್ ಫ್ರಾಂಚೈಸಿ

ಹುದ್ದೆಗಳ ಸಂಖ್ಯೆ:
ಒಟ್ಟು 159 ಹುದ್ದೆಗಳು ಖಾಲಿ ಇವೆ.

ಉದ್ಯೋಗ ಸ್ಥಳ
ಶಿರಸಿ, ಹುಬ್ಬಳ್ಳಿ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಹಾವೇರಿ ವ್ಯಾಪ್ತಿಯಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

HESCOM Recruitment 2021

HESCOM Recruitment 2021

ವಿದ್ಯಾರ್ಹತೆ:
ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ವಿದ್ಯಾರ್ಹತೆಯನ್ನು ಪಡೆದಿರಬೇಕು .

ವೇತನ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತೀ ತಿಂಗಳಿಗೆ ಗ್ರಾಹಕರ ಮಾಪಕಗಳನ್ನು ಓದಿ ಶೇಕಡ 100% ಬಿಲ್ ವಿತರಣೆ ಮಾಡಿ, ಕಂಪನಿಯು ನಿಗದಿಪಡಿಸಿರುವ ಮಾಸಿಕ ಮೂಲ ಗುರಿಯನ್ನು ಸಾಧಿಸಿದಲ್ಲಿ ರೂ.12,000 ಕನಿಷ್ಠ ಪ್ರೋತ್ಸಾಹ ಧನವಾಗಿ ನೀಡಲಾಗುವುದು.

ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಕನಿಷ್ಠ 18 ಹಾಗೂ ಗರಿಷ್ಠ 40 ವರ್ಷ ನಿಗಧಿಪಡಿಸಲಾಗಿದೆ.

ಶಿರಸಿ ಅರ್ಬನ್ ಬ್ಯಾಂಕ್ ನೇಮಕಾತಿ 2021,ಪೂರ್ತಿ ವಿವರಗಳನ್ನು ಇಲ್ಲಿ ಓದಿ..

ಆಯ್ಕೆಯ ವಿಧಾನ:
ಅರ್ಜಿಸಲ್ಲಿಸಿದಂತಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಹುದ್ದೆಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು
ನಿಗದಿತ ಅರ್ಜಿ ನಮೂನೆಯಲ್ಲಿ ತಮ್ಮ ವಿವರವಾದ ಮಾಹಿತಿಯನ್ನು ತುಂಬಿ, ಅಗತ್ಯ ದಾಖಲೆಗಳೊಂದಿಗೆ ಕಛೇರಿಯ ವಿಳಾಸಕ್ಕೆ ಅಂಚೆ ನೋಂದಣಿ ಸ್ವೀಕೃತಿ ಪೋಸ್ಟ್ ಮುಖಾಂತರ ಕಳುಹಿಸಬೇಕು.

ಲಗತ್ತಿಸಬೇಕಾದ ದಾಖಲೆಗಳು:

  • ಸಂಬಂದಿಸಿದ ಗ್ರಾಮ ಪಂಚಾಯಿತಿಯಿಂದ ವಾಸಸ್ಥಾನದ ಬಗ್ಗೆ ಧೃಡೀಕರಿಸಿದ ಪ್ರಮಾಣ ಪತ್ರ.
  • ವಿದ್ಯಾರ್ಹತೆಯ ದೃಢೀಕರಿಸಿದ ದಾಖಲೆಗಳು.
  • ಆಧಾರ್ ಕಾರ್ಡ್ ನ ದೃಢೀಕೃತ ಪ್ರತಿ.
  • ಎಸ್.ಎಸ್.ಎಲ್ ಸಿ ಪ್ರಮಾಣ ಪತ್ರ / ಟಿಸಿ ಪತ್ರದ ದೃಢೀಕೃತ ಪ್ರತಿ.
  • 2 ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವ ವಿಳಾಸ:
ಅರ್ಜಿ ಸಲ್ಲಿಸುವ ವಿಳಾಸವು ಆಯಾ ಉದ್ಯೋಗ ಸ್ಥಳದ ಆಧಾರದ ಮೇಲೆ ಇರುವುದರಿಂದ ಕೆಳಗೆ ನೀಡಲಾಗಿರುವ ಅಧಿಸೂಚನೆ ಲಿಂಕ್ ಮುಖಾಂತರ ಪಡೆದುಕೊಳ್ಳಿ.

ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16/8/2021
ಮೂಲ ದಾಖಲಾತಿ ಪರಿಶೀಲನೆ ದಿನಾಂಕ: 19/08/2021

ಅರ್ಜಿ ಶುಲ್ಕ:(HESCOM Recruitment 2021)
ಅಭ್ಯರ್ಥಿಗಳು ರೂ.295 ರಾಷ್ಟ್ರೀಕೃತ ಬ್ಯಾಂಕಿನ ಡಿ. ಡಿ ಪಡೆಯುವುದರ ಮೂಲಕ ಅರ್ಜಿಯೊಂದಿಗೆ ಸಲ್ಲಿಸಬೇಕು.

ಅಧಿಸೂಚನೆ ಹಾಗೂ ಆರ್ಜಿ ಸಲ್ಲಿಸುವ ವಿಳಾಸ:
ಶಿರಸಿ- https://bit.ly/3CbfkRz
ಹುಬ್ಬಳ್ಳಿ – https://bit.ly/3A4NVir
ಬೆಳಗಾವಿ-https://bit.ly/3jhqA6o
ವಿಜಯಪುರ-https://bit.ly/3rRkddY
ಚಿಕ್ಕೋಡಿ- https://bit.ly/3ikQqqK
ಬಾಗಲಕೋಟೆ – https://bit.ly/2VmSPZn
ಹಾವೇರಿ – https://bit.ly/3fpuWqW

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment