Table of Contents
Gruha Lakshmi Scheme Karnataka apply online Details:
Gruha Lakshmi Scheme Karnataka apply online: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಘೋಷಿಸಲಾದಂತಹ 05 ಯೋಜನೆಗಳಾದ “ಗೃಹ ಲಕ್ಷ್ಮೀ”, ಗೃಹ ಜೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವ ನಿಧಿ ಯೋಜನೆಗಳಲ್ಲಿ ಗೃಹ ಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯು ಜಾರಿಗೆಯಾಗಿ ಅಸ್ತಿತ್ವದಲ್ಲಿದ್ದು, ಇದೀಗ ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನೋಂದಣಿ ಮಾಡಿಕೊಳ್ಳಲು ಜೂನ್ 19ಕ್ಕೆ ಆರಂಭವಾಗಿದೆ. ರಾಜ್ಯದಲ್ಲೆಡೆ ಬಾರಿ ಕುತೂಹಲವನ್ನು ಸೃಷ್ಟಿಸಿದೆ. ಇಂತಹ ಮಹತ್ವದ ಯೋಜನೆಯ ಫಲಕಾರಿಯನ್ನು ಇನ್ನೂ ಪಡೆಯದ ಅಭ್ಯರ್ಥಿಗಳಿಗೆ ಈ “ಗೃಹ ಲಕ್ಷ್ಮೀ” ಯೋಜನೆಗೆ ನೋಂದಣಿ/ಅರ್ಜಿ ಸಲ್ಲಿಸುವುದು ಹೇಗೆ? ಯೋಜನೆಯ ಮುಖ್ಯ ಉದ್ದೇಶವೇನು? ಈ ಯೋಜನೆಯ ಕೆಲವು ಷರತ್ತುಗಳು ಏನು? ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಲು ಅನರ್ಹರು? ಎಂಬುವುದರ ಬಗ್ಗೆ ಎಲ್ಲಾ ವಿವರಗಳನ್ನು ಈ ಲೇಖನದ ಮೂಲಕ ತಿಳಿಯೋಣ ಬನ್ನಿ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
“ಗೃಹ ಲಕ್ಷ್ಮೀ” ಯೋಜನೆಯ ಮುಖ್ಯ ಉದ್ದೇಶ/ ಇದರ ಉಪಯೋಗ:1
ಕರ್ನಾಟಕ ರಾಜ್ಯದ ಎಲ್ಲಾ ಮನೆಯೊಡತಿ/ ಮನೆ ಯಜಮಾನಿಯ ಖಾತೆಗೆ ತಿಂಗಳಿಗೆ ರೂ.2000 ನೀಡುವುದರ ಮೂಲಕ ಅವರ ಸಾಮಾಜಿಕ ಆರ್ಥಿಕ ಸ್ಥಿತಿ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸುವ ಮೂಲಕ ಅವರನ್ನು ಸಬಲೀಕರಣ ಗೊಳಿಸುವತ್ತ ಸಹಾಯ ಮಾಡುತ್ತದೆ. ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಮಹಿಳೆಯರಿಗೆ ಮನೆ ಮಾಲೀಕತ್ವವನ್ನು ಹೆಚ್ಚು ಪ್ರವೇಶಿಸುವಂತೆ ಮಾಡಲು ಈ “ಗೃಹ ಲಕ್ಷ್ಮೀ” ಯೋಜನೆಯು ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದೇ ರೀತಿ ಉದ್ಯೋಗ ಮಾಹಿತಿಯನ್ನು ತಿಳಿಯಲು All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ಷರತ್ತುಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.
“ಗೃಹ ಲಕ್ಷ್ಮೀ” ಯೋಜನೆಯ ಕೆಲವು ಶರತ್ತುಗಳು ಏನೇನು?/ ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು?:
- ಯೋಜನೆಗೆ ಅರ್ಜಿ ಸಲ್ಲಿಸುವ ಮನೆ ಯಜಮಾನಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಕರ್ನಾಟಕ ರಾಜ್ಯದಲ್ಲಿ APL & BPL ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬದ ಮನೆಯೊಡತಿಗೆ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗರಿಷ್ಠ ರೂ. 02ಲಕ್ಷ ವನ್ನು ಮೀರಿರಬಾರದು.
- ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಯು ಯಾವುದೇ ಸರ್ಕಾರಿ ಕೆಲಸದಲ್ಲಿ ಸಕ್ರಿಯಗೊಂಡಿರಬಾರದು.
- ಅರ್ಜಿದಾರರ ಅಥವಾ ಮನೆಯೊಡತಿಯ ಕುಟುಂಬದ ಯಾವುದೇ ವ್ಯಕ್ತಿಯು ತೆರಿಗೆ ಪಾವತಿ ಮಾಡುತ್ತಿದ್ದಲ್ಲಿ ಆ ಕುಟುಂಬವು ಯೋಜನೆಗೆ ಅರ್ಹರಿರುವುದಿಲ್ಲ.
- ಕುಟುಂಬದ ಮನೆಯೊಡತಿಯನ್ನು ಹೊರತುಪಡಿಸಿ, ಇತರೆ ಯಾವುದೇ ಅಭ್ಯರ್ಥಿಗಳಿಗೆ ಈ ಯೋಜನೆ ಸಿಗುವುದಿಲ್ಲ.
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs >d | APPLY HERE |
12th jobs/ PUC jobs. > | APPLY HERE ಕ್ಲಿಕ್ |
“ಗೃಹ ಲಕ್ಷ್ಮೀ” ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?: (Gruha Lakshmi Scheme Karnataka apply online):
ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಘೋಷಿಸಿರುವ “ಗೃಹ ಲಕ್ಷ್ಮೀ” ಯೋಜನೆಗೆ ಅಭ್ಯರ್ಥಿಗಳು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿದಾರರು ಕರ್ನಾಟಕ ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕೂಡ ಅಭ್ಯರ್ಥಿಗಳು ಉಚಿತ ಅರ್ಜಿಯನ್ನು/ನೋಂದಣಿ ಮಾಡಿಕೊಳ್ಳಬಹುದು. ಅಥವಾ ಈ ಹಿಂದೆ ಜಾರಿಗೆಗೊಂಡಂತಹ ಇತರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ “ಸೇವಾ ಸಿಂಧು” ಪೋರ್ಟಲ್ ಆನ್ಲೈನ್ ಮೂಲಕ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ವಿಧಾನಗಳು ಕೆಳಗೆ ನೀಡಲಾಗಿದೆ.
“ಗೃಹ ಲಕ್ಷ್ಮೀ” ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?: (Gruha Lakshmi Scheme Karnataka apply online):
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆ ವಿವರ ಹೊಂದಿರುವ ಪಾಸ್ ಬುಕ್
- ವೋಟರ್ ಐಡಿ
- ಭಾವ ಚಿತ್ರ
ಗೃಹ ಲಕ್ಷ್ಮೀ ಯೋಜನೆ ನೋಂದಣಿ/ಅರ್ಜಿ ಸಲ್ಲಿಕೆ|Gruha Lakshmi Scheme Online Application
“ಗೃಹ ಲಕ್ಷ್ಮೀ” ಯೋಜನೆಗೆ ಅರ್ಜಿ ಸಲ್ಲಿಕೆ/ನೊಂದಣಿ ವಿಧಾನ: (Gruha Jyoti Scheme: How to Apply Online):
- ಮೊದಲು ಅಭ್ಯರ್ಥಿಗಳು ಕರ್ನಾಟಕ ಸರ್ಕಾರ “ಸೇವಾ ಸಿಂಧು” ವೆಬ್ಸೈಟ್ ಗೆ ಭೇಟಿ ನೀಡಬೇಕು. ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ. (ವೆಬ್ಸೈಟ್ ಗೆ ಲಾಗಿನ್ ಕೇಳಿದ್ದಲ್ಲಿ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿಕೊಳ್ಳಿರಿ)
- ವೆಬ್ಸೈಟ್ ಅನ್ನು ತೆರೆದ ಬಳಿಕ, ಅಲ್ಲಿ ಹಲವು ಯೋಜನೆಗಳು ಕಾಣಿಸಿಕೊಳ್ಳುತ್ತದೆ, ಅಲ್ಲಿ “”ಗೃಹ ಲಕ್ಷ್ಮೀ”” ಯಾಜನೆಯ ಮೇಲೆ ಕ್ಲಿಕ್ ಮಾಡಿರಿ.
- ಕ್ಲಿಕ್ ಮಾಡಿದ ಬಳಿಕ ಅಲ್ಲಿ, “ಯೋಜನೆಯ ಫಲಾನುಭವಿಗಳು ತಮ್ಮ ನೋಂದಣಿಯ ವೇಳಾಪಟ್ಟಿಯನ್ನು ಪರಿಶೀಲಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ” ಎಂದು ಇರುತ್ತದೆ.
- ಬಳಿಕ ಆ ಲಿಂಕ್ ಮೇಲೆ ಕ್ಲಿಕ್ ಮಾಡಿರಿ. ಅಲ್ಲಿ ಈ ರೀತಿ ತೋರಿಸುತ್ತದೆ.
- ಅಲ್ಲಿ “Check RC Schedule” ಅನ್ನೋ ಪೇಜ್ ತೆರೆದುಕೊಳ್ಳುತ್ತದೆ, ಅಲ್ಲಿ ನೀವು ಪಡಿತರ ಚೀಟಿ(RC) ಸಂಖ್ಯೆಯನ್ನು ನಮೂದಿಸಿ, Captcha ಅನ್ನು ಪರಿಶೀಲಿಸಿದ ನಂತರ, ಅಲ್ಲಿ ” Fetch RC Details” ಮೇಲೆ ಕ್ಲಿಕ್ ಮಾಡಿರಿ.
- ಕ್ಲಿಕ್ ಮಾಡಿದ ಬಳಿಕ ಅರ್ಜಿದಾರರು ಯಾವ ಕೇಂದ್ರಗಳಿಗೆ (ಉದಾ:- ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಕಛೇರಿ) ಭೇಟಿ ನೀಡಬೇಕು, ಮತ್ತು ಭೇಟಿ ನೀಡಬೇಕಾದ ದಿನಾಂಕ & ಸಮಯದ ವಿವರಗಳು ನೀಡಲಾಗುವುದು.
- ಆ ದಿನದಂದು ಸಂಬಂಧಿಸಿದ ಕೇಂದ್ರ/ ಕಛೇರಿಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬೇಕು.
- ಅಥವಾ ನೀವು ಇನ್ನೊಂದು ವಿಧಾನದ ಮೂಲಕ ನಿಮ್ಮ ಅರ್ಜಿ/ನೊಂದಣಿ ಸಲ್ಲಿಕೆಯ ದಿನಾಂಕ, ಸಮಯ & ಭೇಟಿ ನೀಡಬೇಕಾದ ಕಚೇರಿಯ ವಿವರಗಳನ್ನು ತಿಳಿಯಲು.
- ಕೆಳಗೆ ಆ ನೋಟಿಸ್ ನಲ್ಲಿ ಸರ್ಕಾರ ನೀಡಲಾಗಿರುವ ಸಹಾಯವಾಣಿ ಸಂಖ್ಯೆಗೆ ತಮ್ಮ ಪಡಿತರ ಚೀಟಿಯ(RC) ಸಂಖ್ಯೆಯನ್ನು SMS ಮಾಡುವುದರ ಮೂಲಕ, ಅವುಗಳ ವಿವರಗಳನ್ನು ತಿಳಿಯಬಹುದಾಗಿದೆ
“ಗೃಹ ಲಕ್ಷ್ಮೀ” ಯೋಜನೆ (online application link)/ ಸೇವಾ ಸಿಂಧು ವೆಬ್ಸೈಟ್ ಲಿಂಕ್ : (Gruha Jyoti Scheme Karnataka Online Application)
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
ಗೃಹ ಲಕ್ಷ್ಮಿ ಯೋಜನೆ ಅರ್ಜಿ Online Application:Gruha Lakshmi Scheme Karnataka apply online
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter