ಬಾರ್ಡರ್ ಸೆಕ್ಯುರಿಟಿ ಫೋರ್ಸ್ ( BSF Recruitment 2021 ) ಇಲಾಖೆಯ ನೇಮಕಾತಿ 2021ರ ಅಡಿಯಲ್ಲಿ ,ಇಲಾಖೆಯಲ್ಲಿ ಖಾಲಿ ಇರುವಂತಹ ಕಾನ್ಸ್ಟೇಬಲ್, ನರ್ಸ್, ಸ್ಟಾಫ್ ಈಗೆ ಹಲವಾರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಹೊಂದಿದವರಿಗೆ ಇದು ಉತ್ತಮ ಅವಕಾಶವಾಗಿದೆ.
ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ಪೂರ್ತಿಯಾಗಿ ಓದಿ ಹಾಗೂ ಆಸಕ್ತಿ ಹೊಂದಿದವರು ಜುಲೈ 25/2021ರೊಳಗೆ ಅರ್ಜಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿರುವ ವೆಬ್ಸೈಟ್ ಗೆ ಭೇಟಿ ನೀಡಿ ಕಳುಹಿಸಬೇಕು. ಇದು ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಉತ್ತಮ ಅವಕಾಶವಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಇಲಾಖೆ ಹೆಸರು:
BSF Recruitment 2021
ಹುದ್ದೆಯ ಹೆಸರು:
- ಕಾನ್ಸ್ಟೇಬಲ್
- ಎಸ್ಐ ಸ್ಟಾಫ್ ನರ್ಸ್
- ಎಚ್ ಸಿ (HC)
- ಸಿಟಿ (CT)
- ಎಎಸ್ಐ ಲ್ಯಾಬೊರೇಟರಿ ಟೆಕ್ನಿಷಿಯನ್
- ಎಎಸ್ಐ ಒಪೆರೇಷನ್ ಥಿಯೇಟರ್ ಟೆಕ್ನಿಷಿಯನ್
ಹುದ್ದೆಗಳ ಸಂಖ್ಯೆ:
- ಕಾನ್ಸ್ಟೇಬಲ್ – 15 ಹುದ್ದೆಗಳು ಖಾಲಿ ಇವೆ.
- ಎಸ್ಐ ಸ್ಟಾಫ್ ನರ್ಸ್ – 37 ಹುದ್ದೆಗಳು ಖಾಲಿ ಇವೆ.
- ಎಚ್ ಸಿ (HC) – 20 ಹುದ್ದೆಗಳು ಖಾಲಿ ಇವೆ
- ಸಿಟಿ (CT) – 09 ಹುದ್ದೆಗಳು ಖಾಲಿ ಇವೆ
- ಎಎಸ್ಐ ಲ್ಯಾಬೊರೇಟರಿ ಟೆಕ್ನಿಷಿಯನ್ – 28 ಹುದ್ದೆಗಳು ಖಾಲಿ ಇವೆ.
- ಎಎಸ್ಐ ಒಪೆರೇಷನ್ ಥಿಯೇಟರ್ ಟೆಕ್ನಿಷಿಯನ್ -1 ಹುದ್ದೆ
- ಇಲಾಖೆಯಲ್ಲಿ ಒಟ್ಟು 110 ಹುದ್ದೆಗಳು ಖಾಲಿ ಇವೆ.
ಭಾರತೀಯ ತೈಲ ನಿಗಮ ನೇಮಕಾತಿ 2021 | ಪಿಯುಸಿ/ಡಿಪ್ಲೋಮಾ ಪಾಸ್. ಮುಂದೆ ಓದಿ….
ವಿದ್ಯಾರ್ಹತೆ:
- ಕಾನ್ಸ್ಟೇಬಲ್:
- ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪಡೆದಿರಬೇಕು.
- ಪೀಡಿಯಾಟ್ರಿಕ್ಸ್, ಆಸ್ಪತ್ರೆ ಆಡಳಿತಗಳಲ್ಲಿ ಅನುಭವವನ್ನು ಹೊಂದಿರಬೇಕು.
- ಎಸ್ಐ ಸ್ಟಾಫ್ ನರ್ಸ್:
- ಈ ಹುದ್ದೆಗೆ ಅಭ್ಯರ್ಥಿಯು ಪಿಯುಸಿ / ಪದವಿ / ಡಿಪ್ಲೋಮಾ / GNM ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪಡೆದಿರಬೇಕು.
- ಎಚ್ ಸಿ (HC) :
- ಈ ಹುದ್ದೆಗೆ ಅಭ್ಯರ್ಥಿಯು ದ್ವಿತೀಯ ಪಿಯುಸಿ ಪಸಾಗಿರಬೇಕು
- ಸಿಟಿ (CT) :
- ಈ ಒಂದು ಹುದ್ದೆಗೆ ಅಭ್ಯರ್ಥಿಯು ಎಸ್ಎಸ್ಎಲ್ ಸಿ ಹಾಗೂ ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಡೆದಿರಬೇಕು.
- ಎಎಸ್ಐ ಲ್ಯಾಬೊರೇಟರಿ ಟೆಕ್ನಿಷಿಯನ್ :
- ಹುದ್ದೆಗೆ ದ್ವಿತೀಯ ಪಿಯುಸಿ ಅಥವಾ DMLT ವಿದ್ಯಾರ್ಹತೆಯನ್ನು ಪಡೆದಿರಬೇಕು.
- ಎಎಸ್ಐ ಒಪೆರೇಷನ್ ಥಿಯೇಟರ್ ಟೆಕ್ನಿಷಿಯನ್ :
- ಅಭ್ಯರ್ಥಿಯು ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮಾ ಪಸಾಗಿರಬೇಕು.
ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸು ನಿಗಧಿಪಡಿಸಲಾಗಿದೆ.
ಕೆಒಎಫ್ ನೇಮಕಾತಿ 2021: ಚಾಲಕರು , ಟೆಕ್ನಿಕಲ್ ಅಸಿಸ್ಟೆಂಟ್ ಈಗೆ ಹಲವಾರು ಉದ್ಯೋಗಾವಕಾಶಗಳು.ಮುಂದೆ ಓದಿ…
ವೇತನ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.21,700/- ರಿಂದ 81,100ವರೆಗೂ ವೇತನವನ್ನು ನೀಡಲಾಗುವುದು.
ಆಯ್ಕೆಯ ವಿಧಾನ:
ಅರ್ಜಿಸಲ್ಲಿಸಿದಂತಹ ಪ್ರತಿ ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25/7/2021ರ ವರೆಗೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ bsf.gov.in ನಲ್ಲಿ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಉದ್ಯೋಗ ಪತ್ರಿಕೆಯಲ್ಲಿ ಜಾಹೀರಾತು ಬಿಡುಗಡೆಯಾದ ದಿನಾಂಕದಿಂದ 30 ದಿನಗಳಲ್ಲಿ (26 ಜುಲೈ 2021) ಆನ್‌ಲೈನ್ ಅರ್ಜಿಯನ್ನು ಕೊನೆಗೊಳಿಸಲಾಗುತ್ತದೆ.
ಅರ್ಜಿ ಶುಲ್ಕ:BSF Recruitment 2021
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅಧಿಕೃತ ಅಧಿಸೂಚನೆಯನ್ನು ಗಮನವಿಟ್ಟು ಪೂರ್ಣವಾಗಿ ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ:https://drive.google.com/file/d/1o-VXQLT-K4VIUa9l2a8lbmZuSuft2FBt/view?usp=drivesdk
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.