KOF Recruitment 2021 : ಕೆಒಎಫ್ ನೇಮಕಾತಿ 2021ರಾಯಚೂರು ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ರಾಯಚೂರು ಇಲಾಖೆಯಲ್ಲಿ ಖಾಲಿ ಇರುವಂತಹ ಚಾಲಕರು ಹಾಗೂ ಇತರೇ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತಿ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ಪೂರ್ತಿಯಾಗಿ ಓದಿ ಹಾಗೂ ಆಸಕ್ತಿ ಹೊಂದಿದವರು ಜುಲೈ 15/2021ರೊಳಗೆ ಅರ್ಜಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಬೇಕು. ಇದು ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಉತ್ತಮ ಅವಕಾಶವಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
KOF Recruitment 2021 : ಕೆಒಎಫ್ ನೇಮಕಾತಿ 2021
ಹುದ್ದೆಯ ಹೆಸರು:
- ಚಾಲಕರು
- ಬೆರಳಚ್ಚುಗಾರರು
- ಟೆಕ್ನಿಕಲ್ ಅಸಿಸ್ಟೆಂಟ್
- ಮಾರಾಟ ಸಹಾಯಕರು
- ಸಹಾಯಕ ವ್ಯವಸ್ಥಾಪಕರು
ಹುದ್ದೆಗಳ ಸಂಖ್ಯೆ:
ಇಲಾಖೆಯಲ್ಲಿ ಒಟ್ಟು 17 ಹುದ್ದೆಗಳು ಖಾಲಿ ಇವೆ.
ಉದ್ಯೋಗ ಸ್ಥಳ:
ರಾಯಚೂರು ಜಿಲ್ಲೆ (ಕರ್ನಾಟಕ)
ಭಾರತೀಯ ತೈಲ ನಿಗಮ ನೇಮಕಾತಿ 2021 | ಪಿಯುಸಿ/ಡಿಪ್ಲೋಮಾ ಪಾಸ್.ಓದಿ …
- ವಿದ್ಯಾರ್ಹತೆ:
- ಚಾಲಕರು
- ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಪಡೆದಿರಬೇಕು ಹಾಗೂ ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
- ಕಾನೂನು ಬದ್ಧ ಹೆವಿ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಬೇಕು.
- ಬೆರಳಚ್ಚುಗಾರರು:
- ಅಂಗೀಕೃತ ವಿಶ್ವವಿದ್ಯಾನಿಲ್ಯದಿಂದ ಪದವಿಯನ್ನು ಹೊಂದಿರಬೇಕು ಅಥವಾ 3 ವರ್ಷದ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ ಪಸಾಗಿರಬೇಕು.
- ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು ಹಾಗೂ ಅದರ ಸಂಬಂಧಪಟ್ಟ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು.
- ಕನ್ನಡವನ್ನು ಸ್ಪಷ್ಟವಾಗಿ ಓದಲು ಮತ್ತು ಬರೆಯುವ ಸಾಮರ್ಥ್ಯ ಹೊಂದಿರಬೇಕು.
- ಟೆಕ್ನಿಕಲ್ ಅಸಿಸ್ಟೆಂಟ್:
- ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜಿನಿಂದ ಐಟಿಐ ಫಿಲ್ಟರ್ ತೇರ್ಗಡೆ ಹೊಂದಿರಬೇಕು.
- ಕನ್ನಡವನ್ನು ಓದಲು ಬರೆಯಲು ಸ್ಪಷ್ಟವಾಗಿ ಮಾತನಾಡಲು ಅರಿತಿರಬೇಕು.
- ಮಾರಾಟ ಸಹಾಯಕರು:
- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿಕಾಂ ಅಥವಾ ಬಿಬಿಎ ಪದವಿಯನ್ನು ಪಡೆದಿರಬೇಕು.
- ಒಂದು ವರ್ಷ ಮಾರುಕಟ್ಟೆ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು.
- ಸಹಾಯಕ ವ್ಯವಸ್ಥಾಪಕ:
- ಎಂಕಾಂ / ಎಂಬಿಎ (ಫೈನಾನ್ಸ್) ಸಂಬಂದಿಸಿದ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ಅನುಭವ ಹೊಂದಿರಬೇಕು.
- ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40ವರ್ಷ ವಯಸ್ಸು ನಿಗಧಿಪಡಿಸಲಾಗಿದೆ.
ವೇತನ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.21,400/- ರಿಂದ 78,200ವರೆಗೂ ವೇತನವನ್ನು ನೀಡಲಾಗುವುದು.
ಆಯ್ಕೆಯ ವಿಧಾನ:
ಅರ್ಜಿಸಲ್ಲಿಸಿದಂತಹ ಪ್ರತಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮಾಡುವುದರ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/7/2021 ಸಂಜೆ 5:30
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:KOF Recruitment 2021
ವ್ಯವಸ್ಥಾಪಕ ನಿರ್ದೇಶಕರು,
ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ,
ಸಸಂಘಗಳ ಒಕ್ಕೂಟ ನಿಯಮಿತ,
ಪೋಸ್ಟ್ ಬಾಕ್ಸ್ ಸಂಖ್ಯೆ 328,
ಇಂಡಸ್ತ್ರೀಯಲ್ ಏರಿಯಾ, ಹೈದರಾಬಾದ್ ರೋಡ್,
ರಾಯಚೂರು-584 102
ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪ್ರವರ್ಗ -1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 500/- ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ 1000/- ಅರ್ಜಿ ಶುಲ್ಕವನ್ನು ಸಲ್ಲಿಸಬೇಕು.
ಅಧಿಕೃತ ಅಧಿಸೂಚನೆಯನ್ನು ಗಮನವಿಟ್ಟು ಪೂರ್ಣವಾಗಿ ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ: https://drive.google.com/file/d/1nmYYxj6W2xscCI4Ihd8pJ_kunxRKrApH/view?usp=drivesdk
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.