DCC- ಡಿಸಿಸಿ ಬ್ಯಾಂಕಿನಲ್ಲಿ ಖಾಲಿ ಇರುವ ವ್ಯವಸ್ಥಾಪಕರು, ಸಹಾಯಕ, ಜವಾನ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ.(DCC Bank Recruitment 2022 karnatak) ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
KARNATAKA Jobs | APPLY HERE |
10th/12th Jobs | APPLY HERE |
Railway jobs | APPLY HERE |
Private jobs | Apply HERE |
ಡಿಸಿಸಿ ಬ್ಯಾಂಕ್ ಹಲವಾರು ಹುದ್ದೆಗಳ ನೇಮಕಾತಿ|DCC Bank Recruitment 2022 karnataka
ಹುದ್ದೆಯ ಹೆಸರು:
- ಹಿರಿಯ ವ್ಯವಸ್ಥಾಪಕರು
- ಕಿರಿಯ ವ್ಯವಸ್ಥಾಪಕರು
- ಕಂಪ್ಯೂಟರ್ ಇಂಜಿನಿಯರ್
- ಕ್ಷೇತ್ರಾಧಿಕಾರಿಗಳು
- ಕೃಷಿ ಅಭಿವೃದ್ಧಿ ಅಧಿಕಾರಿ
- ಪ್ರಥಮ ದರ್ಜೆ ಸಹಾಯಕರು
- ಜವಾನ
- ಸೆಕ್ಯೂರಿಟಿ ಗಾರ್ಡ್
ಒಟ್ಟು 71 ಹುದ್ದೆಗಳು ಖಾಲಿ ಇವೆ.
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ | ವೇತನ |
---|---|---|
ಹಿರಿಯ ವ್ಯವಸ್ಥಾಪಕರು | 3 | 45,300- 88,300 |
ಕಿರಿಯ ವ್ಯವಸ್ಥಾಪಕರು | 5 | 45,100- 80,900 |
ಕಂಪ್ಯೂಟರ್ ಇಂಜಿನಿಯರ್ | 1 | 45,100- 80,900 |
ಕ್ಷೇತ್ರಾಧಿಕಾರಿಗಳು | 15 | 40,900- 70,200 |
ಕೃಷಿ ಅಭಿವೃದ್ಧಿ ಅಧಿಕಾರಿ | 1 | 40,900- 70,200 |
ಪ್ರಥಮ ದರ್ಜೆ ಸಹಾಯಕರು | 21 | 33,450- 62,600 |
ಜವಾನ | 23 | 23,500- 47,650 |
ಸೆಕ್ಯೂರಿಟಿ ಗಾರ್ಡ್ | 2 | 23,500- 47,650 |
ಉದ್ಯೋಗ ಸ್ಥಳ:
ವಿಜಯಪುರ
ಭಾರತೀಯ ಅಂಚೆ ಇಲಾಖೆ ಬೃಹತ್ ನೇಮಕಾತಿ 2022 Post Office Jobs 2022 -ವೇತನ ರೂ.27,000 – 80,000/-. ಒಟ್ಟು 5000ಕ್ಕೂ ಅಧಿಕ ಹುದ್ದೆಗಳು & 2nd ಪಿಯುಸಿ ವಿದ್ಯಾರ್ಹತೆ.ಕ್ಲಿಕ್...
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳಿಗೆ – ಕನಿಷ್ಠ 18 & ಗರಿಷ್ಠ 35 ವರ್ಷ
ಹಿಂ . ವರ್ಗ ಅಭ್ಯರ್ಥಿಗಳಿಗೆ – ಕನಿಷ್ಠ 18 & ಗರಿಷ್ಠ 38 ವರ್ಷ
ಪ.ಜಾತಿ / ಪ.ಪಂ / ಪ್ರ 1 ರ ಅಭ್ಯರ್ಥಿಗಳಿಗೆ – ಕನಿಷ್ಠ 18 & ಗರಿಷ್ಠ 40 ವರ್ಷ
ವೇತನ:
ರೂ.23,500 – 88,300/- ವರೆಗೂ ವೇತನವಾಗಿ ನೀಡಲಾಗುವುದು.
ವಿದ್ಯಾರ್ಹತೆ:
● ಹಿರಿಯ ವ್ಯವಸ್ಥಾಪಕರು:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ, ಕಂಪ್ಯೂಟರ್ ಪರಿಜ್ಞಾನ ಹಾಗೂ ಕನಿಷ್ಠ 3 ವರ್ಷ ಬ್ಯಾಂಕಿನಲ್ಲಿ ವ್ಯವಸ್ಥಾಪಕ ದರ್ಜೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
● ಕಿರಿಯ ವ್ಯವಸ್ಥಾಪಕರು:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ, ಕಂಪ್ಯೂಟರ್ ಪರಿಜ್ಞಾನ ಹಾಗೂ ಕನಿಷ್ಠ 3 ವರ್ಷ ಬ್ಯಾಂಕಿನಲ್ಲಿ ಕ್ಷೇತ್ರಾಧಿಕಾರಿ ದರ್ಜೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
● ಕಂಪ್ಯೂಟರ್ ಇಂಜಿನಿಯರ್:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಬಿ.ಇ (ಕಂಪ್ಯೂಟರ್ ಸೈನ್ಸ್/ಇ ಮತ್ತು ಸಿ)/ಎಂ.ಸಿ.ಎ ಪದವಿ ಪಡೆದಿರಬೇಕು.
● ಕ್ಷೇತ್ರಾಧಿಕಾರಿಗಳು:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ, ಕಂಪ್ಯೂಟರ್ ಪರಿಜ್ಞಾನ ಹಾಗೂ ಕನಿಷ್ಠ 2 ವರ್ಷ ಬ್ಯಾಂಕಿನಲ್ಲಿ ಗುಮಾಸ್ತರ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
● ಕೃಷಿ ಅಭಿವೃದ್ಧಿ ಅಧಿಕಾರಿ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಬಿ.ಎಸ್ಸಿ (ಅಗ್ರಿ) ಪದವಿ ಪಡೆದಿರಬೇಕು.
● ಪ್ರಥಮ ದರ್ಜೆ ಸಹಾಯಕರು:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಾಸಾಗಿರಬೇಕು. ಕಂಪ್ಯೂಟರ್ ತರಬೇತಿ, ಸಹಕಾರ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ಅರ್ಹತೆ ಮೇಲೆ ಆದ್ಯತೆ ನೀಡಲಾಗುವುದು.
● ಜವಾನ ಮತ್ತು ಸೆಕ್ಯೂರಿಟಿ ಗಾರ್ಡ್:
ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಬೇಕು.
ಆಯ್ಕೆ ವಿಧಾನ :
ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ 1 : 20 ರ ಅನುಪಾತದಲ್ಲಿ ಲಿಖಿತ ಪರೀಕ್ಷೆಗೆ ಕರೆಯಲಾಗುವುದು ಹಾಗೂ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ 85 ಕ್ಕೆ ಇಳಿಸಿ 1 : 5 ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು . ಇದರೊಂದಿಗೆ ಕಂಪ್ಯೂಟರ್ ಇಂಜಿನಿಯರ ಹಾಗೂ ಕೃಷಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಪ್ರಾವಿಣ್ಯತೆ ಪರೀಕ್ಷೆ ನಡೆಸಲಾಗುವುದು ( ಜವಾನ / ಸೆಕ್ಯೂರಿಟಿ ಗಾರ್ಡ್ ಹೊರತುಪಡಿಸಿ ).
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬ್ಯಾಂಕಿಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದು, ನಂತರ ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಛೇರಿಯ ವಿಳಾಸಕ್ಕೆ ಖುದ್ದಾಗಿ ಭೇಟಿ ನೀಡಿ ಅಂಚೆ ಮೂಲಕ ನಿಗದಿತ ಕಾಲವಧಿಯೊಳಗೆ ಸಲ್ಲಿಸಬೇಕು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು :
- ಸ್ವ ಹಸ್ತಾಕ್ಷರವಿರುವ ತಮ್ಮ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಎಸ್.ಎಸ್.ಎಲ್.ಸಿ ಅಂಕಪಟ್ಟಿ / ವರ್ಗಾವಣೆ ಪ್ರಮಾಣ ಪತ್ರ
- ವಿದ್ಯಾರ್ಹತ ಕುರಿತು ಪ್ರಮಾಣ ಪತ್ರ & ಪದವಿಯ ಎಲ್ಲಾ ವರ್ಗಗಳ ಅಂಕಪಟ್ಟಿ
- ಪ.ಜಾತಿ , ಪ.ಪ. , ಪ್ರ 1 , ಹಿಂದುಳಿದ ವರ್ಗದ ಹಾಗೂ ಇನ್ನಿತರ ಮೀಸಲಾತಿ ಸೌಲಭ್ಯ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಸರಕಾರ ನಿಗದಿಪಡಿಸಿದ ನಮೂನೆಯಲ್ಲಿ ಸಂಬಂಧಿ ಸಿದವರಿಂದ ದೃಢೀಕರಣ ಪಡೆದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು .
ಅರ್ಜಿ ಸಲ್ಲಿಸುವ ವಿಳಾಸ:
ಸಂಚಾಲಕ ಸದಸ್ಯ,
ನೇಮಕಾತಿ ಸಮೀತಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.
ಸೋಲಾಪುರ ರಸ್ತೆ, ವಿಜಯಪುರ.
ESIC Recruitment 2022 – ಸರ್ಕಾರಿ ಹುದ್ದೆಗಳ ನೇಮಕಾತಿ|3293 ಹುದ್ದೆಗಳು & 10th/ಪಿಯುಸಿ/ಯಾವುದೇ ಪದವಿ ವಿದ್ಯಾರ್ಹತೆ|25,500 – 81,100/- ವೇತನ..ಇಲ್ಲಿ Click ಮಾಡಿ
ಅರ್ಜಿ ಶುಲ್ಕ:
ಸಾಮಾನ್ಯ & ಇತರೆ ಅಭ್ಯರ್ಥಿಗಳಿಗೆ – 500/-
SC/ST/ಪ್ರವರ್ಗ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 250/-
ಬ್ಯಾಂಕಿನಿಂದ ಅರ್ಜಿ ಪಡೆಯಲು ಕೊನೆಯ ದಿನಾಂಕ:02/03/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05/03/2022
ಹೆಚ್ಚಿನ ಮಾಹಿತಿಗಾಗಿ: ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ. ಆ ಬಳಿಕ ಅರ್ಜಿಯನ್ನು ಸಲ್ಲಿಸಿ.
DCC Bank Recruitment 2022 karnatak|DCC Bank Recruitment 2022 karnataka
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.DCC Bank Recruitment 2022 karnataka