Table of Contents
ಬೆಂಗಳೂರು ಮೆಟ್ರೋ ನೇಮಕಾತಿ 2025 – BMRCL recruitment 2025
ಬೆಂಗಳೂರ ಮೆಟ್ರೋ ನಿಗಮ ನಿಯಮಿತ ಇತ್ತೀಚಿಗೆ ಕರ್ನಾಟಕದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ತನ್ನ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿರುತ್ತದೆ. ಅಧಿಕೃತ ಅಧಿಸೂಚನೆ ಪ್ರಕಾರ ಸಹಾಯಕ ಮುಖ್ಯ ಭದ್ರತಾ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಲೇಖನದಲ್ಲಿ ನಾವು ಈ ಅಧಿಸೂಚನೆಯ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ನೋಡಿ. ಬೇಕಾಗಿರುವ ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸುವ ರೀತಿ ಎಲ್ಲಾ ಮಾಹಿತಿಗಳನ್ನು ಕೆಳಗೆ ನೀಡಿದ್ದೇವೆ.
ನೇಮಕಾತಿ ಸಂಸ್ಥೆ | BMRCL |
ಹುದ್ದೆಗಳ ವಿವರ | ಸಹಾಯಕ ಮುಖ್ಯ ಭದ್ರತಾ ಅಧಿಕಾರಿ |
ಸ್ಥಳ | ಬೆಂಗಳೂರು |
ವಯಸ್ಸಿನ ಮಿತಿಯ ಮಾಹಿತಿಗಳು :
ಬೆಂಗಳೂರು ಮೆಟ್ರೋ ನೇಮಕಾತಿ 2025 ಸಂಸ್ಥೆಯು ಬಿಡುಗಡೆ ಮಾಡಿದಂತೆ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳ ಗರಿಷ್ಠ ವಯಸ್ಸು 62 ವರ್ಷ ಆಗಿರಬೇಕು. ಈ ವಯಸ್ಸಿನ ಮಿತಿಯ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಪಡೆಯುತ್ತಾರೆ.
ಆಯ್ಕೆ ಪ್ರಕ್ರಿಯೆ :
- ಮೊದಲಿಗೆ ಸಂಸ್ಥೆಯು ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಅನ್ನು ತಯಾರಿಸುತ್ತದೆ.
- ನಂತರ ನೇರ ಸಂದರ್ಶನದ ಮೂಲಕ ಸೂಕ್ತ ಅಭ್ಯರ್ಥಗಳನ್ನು ಆಯ್ಕೆ ಮಾಡಲಾಗುತ್ತದೆ
ಅರ್ಜಿ ಶುಲ್ಕದ ಮಾಹಿತಿಗಳು :
BMRCL recruitment ಸಂಸ್ಥೆಯಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕದ ಮಾಹಿತಿಯನ್ನು ನೀಡಿಲ್ಲ.
ಬೇಕಾಗಿರುವ ಅರ್ಹತೆಯ ಮಾಹಿತಿಗಳು :
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇವಲ ಭಾರತೀಯ ಸೇನೆ ನೌಕಾಪಡೆ ವಾಯುಪಡೆ, ರಾಜ್ಯ ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಇತರ ಸಮಾನ ಕೆಲಸಗಳಲ್ಲಿ ಸೇವೆ ಸಲ್ಲಿಸಿದ ಇರುವಂತಹ ನಿವೃತ್ತ ಸಿಬ್ಬಂದಿ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರಿಜ್ಞಾನ ಕಡ್ಡಾಯವಾಗಿ ಗೊತ್ತಿರಬೇಕು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮಾಹಿತಿಗಳು BMRCL recruitment :
- ಬೆಂಗಳೂರು ಮೆಟ್ರೋ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ https://kannada.bmrc.co.in/ ಭೇಟಿ ನೀಡಿ ಇತ್ತೀಚಿಗೆ ಬಿಡುಗಡೆಯಾಗಿರುವ ಅಧಿಕೃತ ಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.
- ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಎಲ್ಲಾ ಮಾಹಿತಿಗಳನ್ನು ಸಲ್ಲಿಸಬೇಕು.
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಅಪ್ಲೈ ಬಟನ್ ಅನ್ನು ಮೂಲಕ ಅರ್ಜಿ ನಮೂನೆಯನ್ನು ಸಲ್ಲಿಸಬೇಕು ಮತ್ತು ಪ್ರಿಂಟ್ ಔಟ್ ಅನ್ನು ತೆಗೆದಿಟ್ಟುಕೊಂಡು ಈ ಕೆಳಗೆ ನೀಡಿರುವ ವಿಳಾಸಕ್ಕೆ ಬೇಕಾಗಿರುವಾಗ ಅಗತ್ಯ ದಾಖಲೆಗಳೊಂದಿಗೆ ಸ್ಪೀಡ್ ಪೋಸ್ಟ್ ಮಾಡಬೇಕು.
- ಪೋಸ್ಟ್ ಕಳಿಸಬೇಕಾದ ವಿಳಾಸ ಜನರಲ್ ಮ್ಯಾನೇಜರ್ ಬೆಂಗಳೂರು ಮೆಟ್ರೋ ಕಾರ್ಪೊರೇಷನ್ ಲಿಮಿಟೆಡ್ ಮೂರನೇ ಮಹಡಿ ಬಿಎಂಟಿಸಿ ಕಾಂಪ್ಲೆಕ್ಸ್ ಕೆಎಚ್ ರಸ್ತೆ ಶಾಂತಿನಗರ ಬೆಂಗಳೂರು 560027.
- ಈ ಮೇಲೆ ನೀಡಿರುವ ವಿಳಾಸಕ್ಕೆ ಅಭ್ಯರ್ಥಿಗಳು ಆಗಸ್ಟ್ 18ರ ಮುನ್ನ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.
Official website |
Notification |
APPLY LINK |
Apply Link |
ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.
ಭಾರತೀಯ ರೈಲ್ವೆ ನೇಮಕಾತಿ 2025, ಒಟ್ಟು 6238 ಹುದ್ದೆಗಳಿಗೆ ಅರ್ಜಿ ಆಹ್ವಾನ
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We do not provide any job as we are not the recruiter.