ಭಾರತೀಯ ರೈಲ್ವೆ ನೇಮಕಾತಿ 2025, ಒಟ್ಟು 6238 ಹುದ್ದೆಗಳಿಗೆ ಅರ್ಜಿ ಆಹ್ವಾನ

RRB Railway Recruitment 2025: Apply Online for 6238 Technical Posts :

ರೈಲ್ವೆ ನೇಮಕಾತಿ ಇಲಾಖೆಯ ಇತ್ತೀಚೆಗೆ ಭಾರತದಾದ್ಯಂತ 6238 ಟೆಕ್ನಿಕಲ್ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ತನ್ನ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿರುತ್ತದೆ. ಅಧಿಕೃತ ಅಧಿಸೂಚನೆಯ ಪ್ರಕಾರ ಒಟ್ಟು 6238 ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಲೇಖನದಲ್ಲಿ ನಾವು ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ತಿಳಿಸುತ್ತೇನೆ.

ನೇಮಕಾತಿ ಸಂಸ್ಥೆ  ಭಾರತೀಯ ರೈಲ್ವೆ ನೇಮಕಾತಿ 
ಹುದ್ದೆಗಳ ವಿವರ  ಟೆಕ್ನಿಕಲ್ ಗ್ರೇಡ್ 1 ಮತ್ತು 3
ಉದ್ಯೋಗ ಸ್ಥಳ ಭಾರತದಾದ್ಯಂತ 
ಕೊನೆಯ ದಿನಾಂಕ ಜುಲೈ 30

ರೈಲ್ವೆ ನೇಮಕಾತಿ 2025 ಖಾಲಿ ಹುದ್ದೆಗಳ ವಿವರಗಳು :

  • ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಸೂಚನೆಯ ಪ್ರಕಾರ ಟೆಕ್ನಿಕಲ್ ಗ್ರೇಡ್ ಒಂದು ಮತ್ತು ಟೆಕ್ನಿಕಲ್ ಗ್ರೇಡ್ ಮೂರು ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಟೆಕ್ನಿಕಲ್ ಗ್ರೇಡು ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಡಿಪ್ಲೋಮೋ ಅಥವಾ ಬಿಎಸ್ಸಿ ಅಥವಾ ಬಿಇ ಬಿ ಟೆಕ್ ಶಿಕ್ಷಣವನ್ನು ಹೊಂದಿರಬೇಕು.
  • ಟೆಕ್ನಿಕಲ್ ಗ್ರೇಡ್ ಮೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಐಟಿಐ ಶಿಕ್ಷಣವನ್ನು ಪೂರ್ಣ ಮಾಡಿರಬೇಕು ಈ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಪಡೆಯುತ್ತಾರೆ.

ರೈಲ್ವೆ ನೇಮಕಾತಿಯ ವಯಸ್ಸಿನ ಮಿತಿಯ ಮಾಹಿತಿಗಳು :

ಟೆಕ್ನಿಕಲ್ ಗ್ರೇಡ್ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸಿನ ಮಿತಿಯು 18 ವರ್ಷದಿಂದ 33 ವರ್ಷದ ಒಳಗೆ ಇರಬೇಕು ಮತ್ತು ಟೆಕ್ನಿಕಲ್ ಗ್ರೇಡ್ ಮೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿಯ 18 ವರ್ಷದಿಂದ 30 ವರ್ಷದ ಒಳಗಿರಬೇಕು. ಈ ವಯಸ್ಸಿನ ಮಿತಿಯ ಒಳಗೆ ಬರುವ ಅಭ್ಯರ್ಥಿಗಳು ಮಾತ್ರ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.

ಭಾರತೀಯ ರೈಲ್ವೆ ಉದ್ಯೋಗ ವಯಸ್ಸಿನ ಮಿತಿಯ ವಿನಾಯಿತಿಗಳು :

ಅರ್ಜಿ ಸಲ್ಲಿಸುವ ಓಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ ಮೂರು ವರ್ಷಗಳ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ವರಿಷ್ಠ ಐದು ವರ್ಷಗಳ, ನಿವೃತ್ತ ಸೇನಾಧಿಕಾರಿಗಳಿಗೆ ಗರಿಷ್ಠ ಆರು ವರ್ಷಗಳ, ಅಂಗವಿಕಲ ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷಗಳ ವಯಸ್ಸಿನ ಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.

ರೈಲ್ವೆ ನೇಮಕಾತಿಗೆ ಇರುವ ಅರ್ಜಿ ಶುಲ್ಕದ ಮಾಹಿತಿಗಳು :

ಅರ್ಜಿ ಸಲ್ಲಿಸಲು ಬಯಸುವ ಎಸ್ಸಿ ಎಸ್ಟಿ ಅಂಗವಿಕಲ ಮಹಿಳಾ ಅಭ್ಯರ್ಥಿಗಳಿಗೆ ಗರಿಷ್ಠ 250 ರೂಪಾಯಿಗಳ ಸರ್ಕಾರಿ ಅರ್ಜಿ ಶುಲ್ಕ ಇರುತ್ತದೆ ಮತ್ತು ಅರ್ಜಿ ಸಲ್ಲಿಸುವ ಉಳಿದೆಲ್ಲ ಅಭ್ಯರ್ಥಿಗಳಿಗೆ ಐನೂರು ರಪಾಯಿಗಳ ಸರ್ಕಾರಿ ಅರ್ಜಿಸಲು ಇರುತ್ತದೆ.

ಆರ್ ಆರ್ ಬಿ ನೇಮಕಾತಿಯ ವೇತನದ ಮಾಹಿತಿಗಳು :

ಟೆಕ್ನಿಕಲ್ ಗ್ರೇಡ್ ಒಂದು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 29,200 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ ಮತ್ತು ಆಯ್ಕೆಯಾದ ಟೆಕ್ನಿಕಲ್ ಗ್ರೇಡ್ ಮೂರು ಹುದ್ದೆಗೆ 19, 900 ಸಾವಿರ ವೇತನ ಇರುತ್ತದೆ.

ಕರ್ನಾಟಕ ರೈಲ್ವೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಮಾಹಿತಿಗಳು :

  • ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ಇರುತ್ತದೆ. ಅಭ್ಯರ್ಥಿಗಳು ಮೊದಲಿಗೆ ಸಂಸ್ಥೆಯ ಅಧಿಕೃತ RRB ವೆಬ್ ಸೈಟಿಗ ಭೇಟಿ ನೀಡಿ(https://www.rrbapply.gov.in) ತಮ್ಮ ಖಾತೆಯನ್ನು ಕ್ರಿಯೇಟ್ ಮಾಡಬೇಕು.
  • ನಂತರ ಮುಂದಿನ ಹಂತದಲ್ಲಿ ಆಧಾರ್ ನಂಬರ್ ಅನ್ನು ಬಳಸಿ ಲಾಗಿನ್ ಆಗಬೇಕು.
  • ಮುಂದಿನ ಹಂತದಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಯಾವುದೇ ತಪ್ಪುಗಳನ್ನು ಮಾಡದೇ ಭರ್ತಿ ಮಾಡಬೇಕು.
  • ಕೊನೆಗೆ ಅಭ್ಯರ್ಥಿಗಳು ತಮ್ಮ ಭಾವಚಿತ್ರ ಮತ್ತು ಸಿಗ್ನೇಚರ್ ಅಪ್ಲೋಡ್ ಮಾಡಬೇಕು.
  • ನೀಡಿರುವ ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ ನಿಗದಿಪಡಿಸಿರುವ ಸರ್ಕಾರಿ ಯಾರು ಶುಲ್ಕವನ್ನು ಪಾವತಿ ಮಾಡಿ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.
  • ನಂತರ ಅಭ್ಯರ್ಥಿಗಳು ಅರ್ಜಿ ನಮೂನೆ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು.

ಆರ್ ಆರ್ ಬಿ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು :

ಅಭ್ಯರ್ಥಿಗಳಿಗೆ ಅಧಿಕೃತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಅವಕಾಶ ನೀಡಲಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 28 ಆಗಿರುತ್ತೆ ಆಸಕ್ತ ಅಭ್ಯರ್ಥಿಗಳು ಈ ದಿನಂ ಕದ ಮುನ್ನ ತಮ್ಮ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ ಅಭ್ಯರ್ಥಿಗಳಿಗೆ ಸರ್ಕಾರಿ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕವನ್ನು 30 ಜುಲೈಗೆ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We do not provide any job as we are not the recruiter

Leave a Comment