ಮಂಗಳೂರು ಜಿಲ್ಲಾ ನ್ಯಾಯಲಯ ಹುದ್ದೆಗಳು:Mangalore Govt Jobs 2023 Notification

Mangalore Govt Jobs 2023 Notification Details:

Mangalore Govt Jobs 2023: ಈ ಹಿಂದೆ ಬಿಡುಗಡೆಯಾದಂತಹ ದಕ್ಷಿಣ ಕನ್ನಡ ಜಿಲ್ಲೆಯ ಹುದ್ದೆಗಳ ನೇಮಕಾತಿಯ ಅದೇ ಸರದಿಯಲ್ಲಿ ಇದೀಗ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವಂತಹ ಹಲವು ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು & ಸಂಖ್ಯೆ:

  • ಜವಾನ – 36 ಹುದ್ದೆ
  • ಬೆರಳಚ್ಚು ನಕಲುಗಾರರು (Typist-Copyist) – 02 ಹುದ್ದೆ
  • ಬೆರಳಚ್ಚುಗಾರರು (Typist )- 06 ಹುದ್ದೆ
  • ಶೀಘ್ರಲಿಪಿಗಾರರು ( Grade -3) – 10 ಹುದ್ದೆ

ಮಂಗಳೂರು ಜಿಲ್ಲಾ ನ್ಯಾಯಲಯ ಹುದ್ದೆಗಳು:Mangalore Govt Jobs 2023

ಕರ್ನಾಟಕ ಜಿಲ್ಲೆಯಲ್ಲಿನ ಮಂಗಳೂರು ವಿಭಾಗಗಳಲ್ಲಿ ಈ ಹುದ್ದೆಗಳು ಖಾಲಿ ಇದ್ದು, ಇಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ & ಈ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ ಹಾಗೂ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ವೇತನ ಶ್ರೇಣಿ:

  • ಜವಾನ – ವೇತನ ರೂ. 17,000 ರಿಂದ 28, 950ವರೆಗೂ ನೀಡಲಾಗುವುದು.
  • ಬೆರಳಚ್ಚು ನಕಲುಗಾರರು – ರೂ. 21,400 ರಿಂದ 42,000ವರೆಗೂ ವೇತನ ಇರಲಾಗುವುದು.
  • ಬೆರಳಚ್ಚುಗಾರರು – ರೂ. 21,400 ರಿಂದ 42,000ವರೆಗೂ ವೇತನ ಇರಲಾಗುವುದು.
  • ಶೀಘ್ರಲಿಪಿಗಾರರು (Grade -3) – ರೂ. 27,650 ರಿಂದ 52,650/- ವರೆಗೂ ಇರಲಾಗುವುದು.

ನೇಮಕಾತಿ ವಿವರಗಳು: Mangalore Govt Jobs 2023

ನೇಮಕಾತಿ ಸಂಸ್ಥೆದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ
ಹುದ್ದೆಯ ಸ್ಥಳದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ

10th ಪಾಸ್ ಗುಪ್ತಚರ ಇಲಾಖೆ ನೇಮಕಾತಿ 2023..ಅರ್ಜಿ ಸಲ್ಲಿಸಿ

ವಯಸ್ಸಿನ ಮಿತಿ: ಕೊನೆಯ ದಿನಾಂಕಕ್ಕೆ ಗರಿಷ್ಠ ವಯೋಮಿತಿ ಅನ್ನು ಮೀರಿರಬಾರದು, ಆಯಾ ಹುದ್ದೆಯ ವಯಸ್ಸಿನ ಮಿತಿ ಕೆಳಗಿನಂತಿವೆ.

ಸಾಮಾನ್ಯ ವರ್ಗ ಕನಿಷ್ಠ 18 – ಗರಿಷ್ಠ 35 ವರ್ಷ
ಪ್ರವರ್ಗ(2A,2B,3A,3B)ಕನಿಷ್ಠ 18 – ಗರಿಷ್ಠ 38 ವರ್ಷ
SC/ST/ಪ್ರ -1ಕನಿಷ್ಠ 18 – ಗರಿಷ್ಠ 40 ವರ್ಷ

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ಜವಾನ – ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.
  • ಬೆರಳಚ್ಚು ನಕಲುಗಾರರು (Typist-Copyist) – ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ವರ್ಷದ ಪದವಿಪೂರ್ವ ಶಿಕ್ಷಣ ಕೋರ್ಸ್ ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯ ದರ್ಜೆ (ಜೂನಿಯರ್ ಗ್ರೇಡ್) ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು.
  • ಬೆರಳಚ್ಚುಗಾರರು (Typist )- ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ವರ್ಷದ ಪದವಿಪೂರ್ವ ಶಿಕ್ಷಣ ಕೋರ್ಸ್ ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಶೀಘ್ರಲಿಪಿಗಾರರು ( Grade -3) – ಅಭ್ಯರ್ಥಿಯು ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ವರ್ಷದ ಪದವಿಪೂರ್ವ ಶಿಕ್ಷಣ ಕೋರ್ಸ್ ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯ ಶೀಘ್ರ ಲಿಪಿಯಲ್ಲಿ ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಮತ್ತು ಕನ್ನಡ ಹಾಗೂ ಆಂಗ್ಲ ಭಾಷೆಯ ಬೆರಳಚ್ಚು ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಆಯ್ಕೆ ವಿಧಾನ:

  • ಬೆರಳಚ್ಚು ನಕಲುಗಾರರು, ಬೆರಳಚ್ಚುಗಾರರು ಮತ್ತು ಶೀಘ್ರಲಿಪಿಕಾರರು ಹುದ್ದೆಗೆ – ಅಧೀನ ನ್ಯಾಯಾಲಯಗಳ (ಲಿಪಿಕಾ ಮತ್ತು ಇತರೆ ಹುದ್ದೆಗಳ) (ತಿದ್ದುಪಡಿ) ನೇಮಕಾತಿ ನಿಯಮಗಳು 2007 & 2021 ಪ್ರಕಾರ ನೇಮಕಾತಿಯನ್ನು ನಡೆಸಲಾಗುವುದು. ಹಾಗೂ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಬೆರಳಚ್ಚು ಯಂತ್ರ/ ಕಂಪ್ಯೂಟರ್ನಲ್ಲಿ ಬೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು.
  • ಜಮಾನ ಹುದ್ದೆಗೆ – ಅಭ್ಯರ್ಥಿಯು ತನ್ನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ ಹತ್ತು ಅಭ್ಯರ್ಥಿಗಳನ್ನು (1: 10ರ ಅನುಪಾತದಲ್ಲಿ) ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಹುದ್ದೆಗೆ ಆಯ್ಕೆ ಮಾಡಲಾಗುವುದು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆಗಳು 2023.. ಕ್ಲಿಕ್ ಮಾಡಿ

ಅರ್ಜಿ ಶುಲ್ಕದ ಮಾಹಿತಿ:

ಸಾಮಾನ್ಯ & ಓಬಿಸಿ(2A,2B,3A,3B) ವರ್ಗಕ್ಕೆ ರೂ. 200/-
SC /ST/ಪ್ರವರ್ಗ 1/ಅಂಗವಿಕಲರಿಗೆಶುಲ್ಕವಿಲ್ಲ

ಅರ್ಜಿ ಶುಲ್ಕದ ಪಾವತಿ ವಿಧಾನ:
ಅಭ್ಯರ್ಥಿಗಳು ಆಯಾ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಎಂದಿನಂತೆ ಆನ್ಲೈನ್ ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ: Mangalore Govt Jobs 2023

  • ಈ ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಡೆ ಆನ್ಲೈನ್ ಅರ್ಜಿ ಸಲ್ಲಿಕೆಯ ಲಿಂಕ್ ನೀಡಲಾಗಿದೆ, ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಂಗಳೂರು ಜಿಲ್ಲಾ ನ್ಯಾಯಾಲಯದ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Mangalore District Court Recruitment 2023)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 05/12/2023
ಶುಲ್ಕ ಪಾವತಿ ಕೊನೆಯ ದಿನಾಂಕ06/12/2023
ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Apply Onlineಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

Mangalore Govt Jobs 2023|Mangalore Govt Jobs 2023 Notification

Raichur Zilla Panchayat Recruitment 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment